ಮೈಸೂರು

ಸೈಕ್ಲಿಂಗ್ : ರಾಜ್ಯಕ್ಕೆ 3 ನೇ ಬಾರಿಗೆ ಸಮಗ್ರ ಪ್ರಶಸ್ತಿ

ಮೈಸೂರು,ಫೆ.24:- ಸೈಕ್ಲಿಂಗ್ ಮೈಸೂರು ತರಬೇತಿ ಕೇಂದ್ರದ ಸೈಕ್ಲಿಂಗ್ ಕ್ರೀಡಾ ಪಟುಗಳು ಗದಗ್ ಜಿಲ್ಲೆಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನವನದಲ್ಲಿ ನಡೆದ 17 ನೆಯ ರಾಷ್ಟ್ರೀಯ ಮೌಂಟನ್ ಬೈಕ್ ಚಾಂಪಿಯನ್‌ ಶಿಪ್ 2020-21ರಲ್ಲಿ ಭಾಗವಹಿಸಿ ಚಿನ್ನದ ಪದಕಗಳನ್ನು ಗಳಿಸಿದ್ದಾರೆ .

ಮೈಸೂರು ಪತ್ರಕರ್ತರ ಸಂಘದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಾತನಾಡಿದ ಸೈಕ್ಲಿಂಗ್ ಮೈಸೂರು ತರಬೇತಿ ಕೇಂದ್ರ ದ ಸಂಸ್ಥಾಪಕ , ತರಬೇತಿದಾರರಾದ ಟಿ ವಿ ನಾಗರಾಜ್  ಇವರ ಶ್ರಮ ನಮ್ಮ ಕರ್ನಾಟಕ ರಾಜ್ಯಕ್ಕೆ ಶೇಕಡ 75 ರಷ್ಟು ಅಂಕಗಳನ್ನು ಪಡೆದು ರಾಜ್ಯಕ್ಕೆ 3 ನೇ ಬಾರಿಗೆ ಸಮಗ್ರ ಪ್ರಶಸ್ತಿ ಪಡೆಯಲು ಕಾರಣಕರ್ತರಾಗಿದ್ದಾರೆ ಎಂದು   ತಿಳಿಸಿದರು.

ರಾಷ್ಟ್ರಮಟ್ಟ 2020 ಸ್ಪರ್ಧೆಯಲ್ಲಿ ನಮ್ಮ ಅಕಾಡೆಮಿಯ ನಾಲ್ಕು ಕ್ರೀಡಾ ಪಟುಗಳು ಚಿನ್ನದ ಪದಕ ಗಳಿಸಿದ್ದಾರೆ, ಅಡೋನೀಸ್ ಕೆ , ತಂಗ್ಯ್ಫೂ, ಚರಿತ್ ಗೌಡ, ಕ್ಯಾರಿನ್ ಮಾರ್ಷಲ್ , ಸಮರ್ಪಣಾ ಜೈನ್ ಚಿನ್ನದ ಪದಕಗಳನ್ನು ಗಳಿಸಿರುತ್ತಾರೆ,

ಈ ನಾಲ್ವರು ಕ್ರೀಡಾ ಪಟುಗಳಲ್ಲಿ ಇಬ್ಬರು  ಅಡೋನೀಸ್ , ಚರಿತ್  ಸೈಕ್ಲಿಸ್ಟ್ ಭಾರತ ತಂಡಕ್ಕೆ ಮೊಟ್ಟಮೊದಲ ಬಾರಿಗೆ ಮೈಸೂರು ಜಿಲ್ಲೆಯಿಂದ ಆಯ್ಕೆ ಆಗಿದ್ದು , ಬುಧವಾರ ಸಂಜೆ 5  ಗಂಟೆಗೆ ಪಂಜಾಬ್ ರಾಜ್ಯದ ಪಟಿಯಾಲ ಕ್ರೀಡಾ ಸಂಸ್ಥೆಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಘೋಷಿಸಿದೆ. ಇವರುಗಳಿಗೆ ವಿದ್ಯಾಭ್ಯಾಸ , ವಸತಿ , ಆಹಾರ , ಔಷಧೋಪಚಾರ ಮತ್ತು ಸೈಕ್ಲಿಂಗ್ ಕ್ರೀಡೆಗೆ ಸಂಬಂಧಪಟ್ಟ ಎಲ್ಲಾ ಸೌಲಭ್ಯಗಳನ್ನು ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸೈಕ್ಲಿಂಗ್ ಕ್ರೀಡಾಪಟು ಅಡೋನೀಸ್ ಭಾರತದ ಅತ್ಯುತ್ತಮ ಅಡ್ಡಗುಡ್ಡಗಳ ಸೈಕ್ಲಿಂಗ್ ಕ್ರೀಡಾಪಟು ಎಂದು ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ” ವತಿಯಿಂದ ಪ್ರಶಸ್ತಿ ನೀಡಿದ್ದಾರೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: