ಸುದ್ದಿ ಸಂಕ್ಷಿಪ್ತ

ನಾಳೆಯಿಂದ ಫೆ.28 ರವರೆಗಿನ ನಾಟಕ ಪ್ರದರ್ಶನದ ಮಾಹಿತಿ

ಮೈಸೂರು,ಫೆ.24-ನಗರದ ವಿವಿಧೆಡೆ ಫೆ.25 ರಿಂದ ಫೆ.28 ರವರೆಗೆ ಪ್ರದರ್ಶನಗೊಳ್ಳುವ ನಾಟಕಗಳ ಕುರಿತ ಮಾಹಿತಿ ಇಂತಿದೆ.

ಫೆ.25 ರಂದು ಮಧ್ಯಾಹ್ನ 3ಕ್ಕೆ ಜಯಲಕ್ಷ್ಮಿಪುರಂನಲ್ಲಿರುವ ಕುವೆಂಪು ರಂಗಮಂದಿರದಲ್ಲಿ ಎ.ಆರ್.ಮಣಿಕಾಂತ್ ಪ್ರೇಮಪತ್ರಗಳ ಆಧಾರಿತ `ಫಸ್ಟ್ ಲವ್’ ನಾಟಕ ಪ್ರದರ್ಶನಗೊಳ್ಳಲಿದೆ. ಪ್ರವೀಣ್ ಬೆಳ್ಳಿ ನಿರ್ದೇಶನದ ನಾಟಕವನ್ನು ಮೈಸೂರಿನ ಅದಮ್ಯ ರಂಗಶಾಲೆ ತಂಡ ಪ್ರಸ್ತುತ ಪಡಿಸಲಿದೆ.

ಫೆ.26, 27 ರಂದು ಸಂಜೆ 7ಕ್ಕೆ ಕಲಾಮಂದಿರದ ಕಿರುರಂಗಮಂದಿರದಲ್ಲಿ ಡಾ. ಕೆ. ಶಿವರಾಮ ಕಾರಂತರ ಬೆಟ್ಟದ ಜೀವ ನಾಟಕ ಪ್ರದರ್ಶನಗೊಳ್ಳಲಿದೆ. ಎಸ್.ಆರ್. ರಮೇಶ್ ನಾಟಕವನ್ನು ನಿರ್ದೇಶಿಸಿದ್ದು, ಮೈಸೂರಿನ ಪರಿವರ್ತನ ರಂಗಸಮಾಜ ತಂಡ ನಾಟಕವನ್ನು ಪ್ರಸ್ತುತ ಪಡಿಸಲಿದ್ದಾರೆ.

ಫೆ.27, 28 ರಂದು ಸಂಜೆ 6.30ಕ್ಕೆ ಬೋಗಾದಿ ರಸ್ತೆಯಲ್ಲಿರುವ ಧ್ವನ್ಯಾಲೋಕದಲ್ಲಿ `ದೋಪ್ದಿ’ ನಾಟಕ ಪ್ರದರ್ಶನಗೊಳ್ಳಲಿದೆ. ಮಹಾಶ್ವೇತಾದೇವಿ ನಾಟಕದ ಮೂಲಕಥೆ. ಕೆ.ಆರ್.ಸುಮತಿ ನಿರ್ದೇಶನದಲ್ಲಿ ಜನಮನ ತಂಡ ನಾಟಕವನ್ನು ಪ್ರಸ್ತುತ ಪಡಿಸಲಿದೆ.

ಫೆ. 27, 28 ರಂದು ಸಂಜೆ 6.30ಕ್ಕೆ ರಂಗಾಯಣದ ವನರಂಗದಲ್ಲಿ ಷೇಕ್ಸ್ ಪಿಯರ್ ನ `ಮ್ಯಾಕ್ ಬೆತ್’ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕವನ್ನು ಕನ್ನಡಕ್ಕೆ ರಾಮಚಂದ್ರ ದೇವ ಅನುವಾದಿಸಿದ್ದಾರೆ. ಎಸ್. ರಾಮನಾಥ ನಿರ್ದೇಶನ ಮಾಡಿದ್ದಾರೆ. ರಂಗಶಾಲೆಯ ವಿದ್ಯಾರ್ಥಿಗಳು ನಾಟಕವನ್ನು ಪ್ರಸ್ತುತ ಪಡಿಸಲಿದ್ದಾರೆ.

ಫೆ.28 ರಂದು ಸಂಜೆ 6.15ಕ್ಕೆ ಕಲಾಮಂದಿರದ ಕಿರುರಂಗಮಂದಿರದಲ್ಲಿ ಡಾ. ರಿಚರ್ಡ್ ಪಿ. ಫೆನ್ಮೆನ್ ಕತೆ ಆಧಾರಿತ `Q.E.D.’ ನಾಟಕ ಪ್ರದರ್ಶನಗೊಳ್ಳಲಿದೆ. ಯತೀಶ್ ಕೊಳ್ಳೇಗಾಲ ನಾಟಕವನ್ನು ನಿರ್ದೇಶಿಸಿದ್ದು, ಅರಿವು ರಂಗ ತಂಡ ನಾಟಕವನ್ನು ಪ್ರಸ್ತುತ ಪಡಿಸಲಿದೆ.

ಫೆ.28 ರಂದು ಸಂಜೆ 7ಕ್ಕೆ ಜಯಲಕ್ಷ್ಮಿಪುರಂನ ಶ್ರೀ ಕುವೆಂಪು ರಂಗಮಂದಿರದಲ್ಲಿ `ಬ್ಲ್ಯಾಕ್ ಅಂಡ್ ವೈಟ್’ ನಾಟಕ ಪ್ರದರ್ಶನಗೊಳ್ಳಲಿದೆ. ಪ್ರವೀಣ್ ಬೆಳ್ಳಿ ನಿರ್ದೇಶನದ ಈ ನಾಟಕವನ್ನು ಅದಮ್ಯ ರಂಗಶಾಲೆ ತಂಡ ಪ್ರಸ್ತುತ ಪಡಿಸುತ್ತಿದೆ. (ಎಂ.ಎನ್)

Leave a Reply

comments

Related Articles

error: