ಮೈಸೂರು

ಪಾಲಿಕೆ ಸದಸ್ಯ ಮಾ.ವಿ.ರಾಮ್ ಪ್ರಸಾದ್ ಬಿಜೆಪಿ ಸೇರ್ಪಡೆ

ಮೈಸೂರು, ಫೆ,24 :-  ಮಹಾನಗರ ಪಾಲಿಕಾ ಪಕ್ಷೇತರ ಸದಸ್ಯ ಮ ವಿ ರಾಮಪ್ರಸಾದ್ ರವರು ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು.

,ಉಸ್ತುವಾರಿ ಸಚಿವರು, ಸಹಕಾರಿ ಸಚಿವರಾದ ಎಸ್ ಟಿ ಸೋಮಶೇಖರ್, ಶಾಸಕರಾದ ಎಸ್ ಎ ರಾಮದಾಸ್, ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ, ಶಾಸಕರಾದ ಎಲ್ ನಾಗೇಂದ್ರ, ಮೈಸೂರು ನಗರ ವಿಭಾಗದ ಪ್ರಭಾರಿಗಳಾದ ಮೈ ವಿ ರವಿಶಂಕರ್, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರಾಜೇಂದ್ರ, ಮೈಸೂರು ನಗರ ಅಧ್ಯಕ್ಷರಾದ ಶ್ರೀವತ್ಸ, ಮುಡಾ ಅಧ್ಯಕ್ಷರಾದ ಎಚ್ ವಿ ರಾಜೀವ್ ರವರ ಸಮುಖದಲ್ಲಿ ಸೇರ್ಪಡೆಯಾದರು.

ಮೈಸೂರು ನಗರ ಭಾರತೀಯ ಜನತಾ ಪಾರ್ಟಿ ನಗರ ಅಧ್ಯಕ್ಷ ರಾದ ಶ್ರೀವತ್ಸ ಅವರು ಪಕ್ಷದ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.

ಮ ವಿ ರಾಮಪ್ರಸಾದ್ ರವರು 2008-2013ರಲ್ಲಿ, ಎರಡು ಬಾರಿ ಬಿಜೆಪಿ ಯಿಂದ ನಗರ ಪಾಲಿಕೆಯ ಚುನಾವಣೆಯಲ್ಲಿ ಜಯಸಾಧಿಸಿದ್ದರು, ಆದರೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಯಿಂದ ಟಿಕೆಟ್ ವಂಚಿತರಾಗಿ ಜನರ ಹಾಗೂ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸ್ವತಂತ್ರವಾಗಿ ಸ್ಪರ್ದಿಸಿ ಅತಿ ಹೆಚ್ಚಿನ ಮತಗಳ ಅಂತರ ದಿಂದ ಜಯ ಸಾಧಿಸಿದ್ದರು, ಲೋಕಸಭಾ ಚುನಾವಣೆಯಲ್ಲಿ ಸಹ ಇವರು ಬಿಜೆಪಿ ಗೆ ಬೆಂಬಲಿಸಿ ಕೆಲಸ ಮಾಡಿದ್ದರು, ಈ ವಾರ್ಡಿನ ಜನತೆಗೆ ಹಾಗೂ ಕಾರ್ಯಕರ್ತ ಅಪೇಕ್ಷೆಯು ಸಹ ಮ ವಿ ರಾಮಪ್ರಸಾದ್ ರವರು ಬಿಜೆಪಿ ಸೇರಬೇಕೆಂಬುದಾಗಿತ್ತು, ಅಲ್ಲದೆ ಇವರು ಬಿಜೆಪಿ ಯಲ್ಲಿ ಎರಡು ಬಾರಿ ಯುವ ಮೋರ್ಚಾ ಅಧ್ಯಕ್ಷರಾಗಿ, ಎರಡು ಬಾರಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಾಗಿ, ಬಿಜೆಪಿ ನಗರ ಘಟಗದ ಉಪಾಧ್ಯಕ್ಷ ರಾಗಿ, ಪಾರ್ಟಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ಹೊತ್ತು ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದರು, ಇದನ್ನು ಮನಗಂಡು ಬಿಜೆಪಿ ರಾಜ್ಯ ನಾಯಕರು ಹಾಗೂ ಸ್ಥಳೀಯ ನಾಯಕರು ಇವರನ್ನು ಬಿಜೆಪಿ ಸೇರಿಸಿ ಕೊಂಡಿದ್ದಾರೆ.

ಈ ಬಾರಿ ಮಹಾಪೌರರ ಚುನಾವಣಾ ಯಲ್ಲಿ ಮ ವಿ ರಾಮಪ್ರಸಾದ್ ರವರ ಮತ ನಿರ್ಣಾಯಕ ವಾಗಿದ್ದರು ಸಹ ಅಧಿಕಾರಕ್ಕೆ ಹಾತೊರೆಯದೆ ಪಕ್ಷಕ್ಕೆ ಮರಳಿದ್ದಾರೆ, ಇದರಿಂದ ಕಾರ್ಯಕರ್ತರ ಹಾಗೂ ಜನತೆಯ ಮೆಚ್ಚುಗೆ ಗೆ ಪಾತ್ರರಾಗಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಗಳಾದ ಸೋಮಸುಂದರ್, ಮುಖಂಡರಾದ ಸಿ ಸಂದೀಪ್, ಅದ್ವೈತ್ ಹಾಜರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: