ಮನರಂಜನೆಮೈಸೂರು

ಸಿನಿಮಾ ದಲ್ಲಿ ಜಾತಿ ಧರ್ಮ ರಾಜಕೀಯ ಸೇರಿಸಬಾರದು : ಸಂದೇಶ ನಾಗರಾಜ್

ಮೈಸೂರು, ಫೆ.24:-    ಸಿನಿಮಾದಲ್ಲಿ ಜಾತಿ,ಧರ್ಮ ರಾಜಕೀಯ ಸೇರಿಸಬಾರದು ಎಂದು ವಿಧಾನ ಪರಿಷತ್ ಸದಸ್ಯ ಹಿರಿಯ ನಿರ್ಮಾಪಕ ಸಂದೇಶ್ ನಾಗ್ ರಾಜ್  ತಿಳಿಸಿದರು.
ದರ್ಶನ್ ಜಗ್ಗೇಶ್ ಪ್ರಕರಣ ವಿಚಾರವಾಗಿ
ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹಿರಿಯ ನಟರಾಗಿ ಜಗ್ಗೇಶ್ ಈ ರೀತಿ ಜಾತಿ,ಧರ್ಮ ,ರಾಜಕಾರಣ ತರಬಾರದಿತ್ತು. ದರ್ಶನ್ ಸಹ ಈ ಪ್ರಕರಣದ ಬಗ್ಗೆ ಸ್ಪಷ್ಟನೇ ನೀಡಬೇಕಾಗಿತ್ತು.  ನಾನು ದರ್ಶನ್ ಜೊತೆ  ಮಾತ ನಾಡಿದ್ದೇನೆ. ಸದ್ಯ ದಲ್ಲೇ ಈ ವಿಚಾರವಾಗಿ ಮಾತನಾಡುವುದಾಗಿ    ತಿಳಿಸಿದ್ದಾರೆ. ಎರಡು ದಿನ ಕಾದು ನೋಡಿ ನಾನೇ ಇಬ್ಬರನ್ನು
ಸೇರಿಸಿ ಸುದ್ದಿಗೋಷ್ಠಿ ನಡೆಸುತ್ತೇನೆ  ಎಂದು ತಿಳಿಸಿದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: