ಮೈಸೂರು

ತಂತ್ರಜ್ಞಾನ ದ ಕ್ಷಿಪ್ರ ಕ್ರಾಂತಿ ಯಿಂದ ಹೊಸ ಆವಿಷ್ಕಾರ : ಹನುಮಂತ ಚಾರ್ ಜೋಶಿ

ಅಂತರ ರಾಷ್ಟ್ರೀಯ ಇ ಸಮಾವೇಶಕ್ಕೆ ಚಾಲನೆ

ಮೈಸೂರು, ಫೆ.24 :- ಮೈಸೂರಿನ ಎಂ.ಎಂ.ಕೆ. ಮತ್ತು ಎಸ್.ಡಿ.ಎಂ.ಮಹಿಳಾ ಮಹಾ ವಿದ್ಯಾಲಯ
ಸೂಕ್ಷ್ಮ ಜೀವ ಶಾಸ್ತ್ರ ವಿಭಾಗ ಮತ್ತು ಎ.ಎಂ.ಐ ಮೈಸೂರು ಛಾಪ್ಟರ್ ಸಹಯೋಗದಲ್ಲಿ ಒಂದು ದಿನದ ಅಂತರ ರಾಷ್ಟ್ರೀಯ ಇ ಸಮಾವೇಶವನ್ನು ಆಯೋಜಿಸಲಾಗಿತ್ತು.

ಸಮಾವೇಶವನ್ನು ಉದ್ಘಾಟಿಸಿದ ಶಾರದವಿಲಾಸ ಕಾಲೇಜು ಪ್ರಾಂಶುಪಾಲರಾದ ಪ್ರೊ.ಹನುಮಂತಾ ಚಾರ್ ಜೋಶಿ ಮಾತನಾಡಿ ಇಂದಿನ ವಿಜ್ಞಾನ ಯುಗದಲ್ಲಿ ಸಂಶೋಧನೆಗಳು ನಾಗಾಲೋಟದಲ್ಲಿ ಸಾಗುತ್ತಿದ್ದು ತಂತ್ರಜ್ಞಾನದ ಕ್ಷಿಪ್ರಕ್ರಾಂತಿಯಿಂದಾಗಿ ಹೊಸ ಆವಿಷ್ಕಾರಗಳು ನಡೆಯುತ್ತಿದೆ. ವರ್ತಮಾನದ
ಪ್ರತಿಯೊಂದು ಘಟನೆಗಳಿಗೂ ವಿಜ್ಞಾನದ ಸ್ಪರ್ಶ ವನ್ನು ಕಾಣಬಹುದು. ಪ್ರಕೃತಿಯಲ್ಲಿ ಸಂಭವಿಸುವ ಜೈವಿಕ ಘಟನೆಗಳು, ಸೂರ್ಯ ಚಂದ್ರರ ಚಲನೆಯು ವಿಜ್ಞಾನದ ತತ್ವದ ಮೇಲೆ ನಡೆಯುತ್ತಿದೆ. ಇಂದಿನ ಯಾವುದೇ ಸಂಶೋಧನೆಗಳಿಗೂ ಸ್ಪಷ್ಟವಾದ ಕಲಿಕೆ ಮತ್ತು ಬೆಳವಣಿಗೆಯ ಹೊಸ ಅವಕಾಶಗಳನ್ನು ಒದಗಿಸುತ್ತಿದೆ ಎಂದು ಹೇಳಿದರು.

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಸಾಯಿನಾಥ ಮಲ್ಲಿಗೆಮಾಡು ಅವರು ಮಾತನಾಡಿ ವಿಶ್ವಕ್ಕೆ ವಿಜ್ಞಾನದ ಹೊಸ ಚೈತನ್ಯದ ಆವಿಷ್ಕಾರ ವನ್ನು  ನೀಡಿದ ದೇಶ ಭಾರತ. ನಮ್ಮ ದೇಶದಲ್ಲಿ ಪ್ರಾಚೀನ ಕಾಲದಲ್ಲಿಯೇ ವಿಜ್ಞಾನದ ಎಲ್ಲ ಸಂಶೋಧನೆಗಳು ಪ್ರಾರಂಭಗೊಂಡಿದೆ. ಖಗೋಳಶಾಸ್ತ್ರ, ಜೀವಶಾಸ್ತ್ರ , ರಸಾಯನ ಶಾಸ್ತ್ರ ,ಜೈವಿಕ ವಿಜ್ಞಾನದ ಮೇಲೆ ಸಾವಿರಾರು ಸಂಶೋಧನೆ ನಡೆದಿದೆ. ನಮ್ಮ ರೈತರು ಬೆಳೆಯುವ ರೀತಿಯೂ ಸಹ ವಿಜ್ಞಾದ ಮೂಲವೇ ಆಗಿದೆ.

ವರ್ತಮಾನದ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿಜ್ಞಾನದ ವಿಷಯವನ್ನು ಸಂಶೋಧನೆಗೆ ಒಳಪಡಿಸಿದರೆ ಹೆಸರು ಮತ್ತು ಯಶಸ್ಸು ಎರಡನ್ನು ಪಡೆಯಲು ಸಾಧ್ಯವಾಗುತ್ತದೆ. ವಿಜ್ಞಾನದ ಜೊತೆಗೆ ಮಾನವಿಕ ವಿಷಯಗಳ ತೌಲನಿಕ ಅಧ್ಯಯನಗಳು ಇಂದು ಅನಿವಾರ್ಯತೆಯ ವಿಷಯಗಳಾಗಿವೆ.  ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯಂತೆ ನಮ್ಮ ಕಾಲೇಜಿನ ವಿಜ್ಞಾನ ವಿಭಾಗಗಳು ವಿದ್ಯಾರ್ಥಿನಿಯರಿಗೆ ಪದವಿಯ ಹಂತದಲ್ಲಿಯೇ ಸಂಶೋಧನೆಗೆ ಭಾಗಿಯಾಗಿಸಲು ಅವಕಾಶಗಳನ್ನು ನೀಡುತ್ತಿವೆ.  ಈ ವರ್ಷದಲ್ಲಿ ನಮ್ಮ ಕಾಲೇಜು ನ್ಯಾಕ್ ಮಾನ್ಯತೆಯನ್ನು ಪಡೆಯಲಿದ್ದು ವಿಜ್ಞಾನದ ವಿಷಯಗಳಿಗೆ ಸಂಶೋಧನಾ ಯೋಜನೆಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದ್ದು ಈಗಾಗಲೇ ಕೇಂದ್ರ ಸರ್ಕಾರದ ಸ್ಟಾರ್ ಕಾಲೇಜು ಯೋಜನೆಯನ್ನು ಪಡೆಯಲು ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿ.ಎಫ್ ಆರ್.ಐ. ವಿಜ್ಞಾನಿಗಳಾದ ಡಾ.ಟಿ.ಆನಂದ್ ,ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಅತೀಯ ಸಮೀನ್, ಪ್ರಾಧ್ಯಾಪಕರಾದ ಪ್ರೊ.ರಾಜೇಶ್ವರಿ, ಮಹಾಜನ ಸ್ನಾತಕೋತ್ತರ ಕೇಂದ್ರದ ಅಧ್ಯಾಪಕರಾದ ಡಾ.ದಿವ್ಯ ಮತ್ತು ನಗರದ ವಿವಿಧ ಕಾಲೇಜುಗಳು ಮತ್ತು ಎಸ್.ಡಿ.ಎಂ.ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Leave a Reply

comments

Related Articles

error: