ಮೈಸೂರು

ಮೃಗಾಲಯದ ಪ್ರಾಣಿ ಪಕ್ಷಿಗಳ ದತ್ತು ಸ್ವೀಕಾರ

ಮೈಸೂರು, ಫೆ.24:- ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಹಲವರು ಪ್ರ಻ಣಿ-ಪಕ್ಷಿಗಳನ್ನು ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದಾರೆ.
ಬೆಂಗಳೂರಿನ ಶ್ರೀಶೈಲ್ ವಿ.ಕಲ್ಬುರ್ಗಿ ಅವರು 10,500ರೂ. ಪಾವತಿಸಿ ನಾಗರಹಾವು, ಕಾಮನ್ ಬ್ರಾನ್ ಔಲ್ ಮತ್ತು ಲೆಪರ್ಡ್ ಕ್ಯಾಟ್, ಬೆಂಗಳೂರಿನ ಸಿದ್ಧಾರ್ಥ್ ಹರಿ ಎಂಬುವವರು 5,500 ರೂ. ಪಾವತಿಸಿ ಇಂಡಿಯನ್ ಕ್ರಸ್ಟೆಡ್ ಪೋಕ್ರ್ಯುಪಿನ್ ಮತ್ತು ರುಸೇಲ್ ವೈಪರ್ ಅನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿರುತ್ತಾರೆ.
ಬೆಂಗಳೂರಿನ ಮನೀಶ್ ಬಾಬು ಎಸ್. ಅವರು 5,000ರೂ. ಪಾವತಿಸಿ ಲೆಪರ್ಡ್ ಕ್ಯಾಟ್, ಮೈಸೂರಿನ ಅನೂಪ್ ಹೆಚ್. ಅವರು 3,500ರೂ. ಪಾವತಿಸಿ ಕಾಳಿಂಗ ಸರ್ಪ, ಬೆಂಗಳೂರಿನ ಆಕರ್ಶ್ ಬಿ.ಎನ್ ಅವರು 5,000ರೂ. ಪಾವತಿಸಿ ಹಿಮಾಲಯನ್ ಗೋರಾಲ್ ಹಾಗೂ ಉನ್ನತಿ ಎ.ರಾವ್ ಅವರು 3,000ರೂ. ಪಾವತಿಸಿ ನಕ್ಷತ್ರದ ಆಮೆ ಮತ್ತು ಕಾಮನ್ ಕೆರೆ ಹಾವನ್ನು, ಮೈಸೂರಿನ ಲಾವಣ್ಯ ಅವರು 7,500 ರೂ. ಪಾವತಿಸಿ ಸ್ಪಾಟೆಡ್ ಡೀರ್ ಅನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿರುತ್ತಾರೆ.
ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈ ಜೋಡಿಸಿದ ಎಲ್ಲರಿಗೂ ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: