ಮೈಸೂರು

ಮನೆ ಕಳ್ಳತನ ಮಾಡುವ ಕುಖ್ಯಾತ ವ್ಯಕ್ತಿ ಮತ್ತವನ ಇಬ್ಬರು ಸಹಚರರ ಬಂಧನ

ಮೈಸೂರು,ಫೆ.24:-  ಮನೆ ಕಳ್ಳತನ ಮಾಡುವ ಕುಖ್ಯಾತ ವ್ಯಕ್ತಿ ಹಾಗೂ ಈತನ ಕೃತ್ಯಗಳಿಗೆ ಸಹಕರಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 21,47,500 ರೂ.ಮೌಲ್ಯದ 391 ಗ್ರಾಂ ತೂಕದ ಚಿನ್ನಾಭರಣ, ಒಂದು ಕಾರು
ಮತ್ತು ಒಂದು ವಿದೇಶಿ ನಿರ್ಮಿತ ರಿವಾಲ್ವರ್ ಮತ್ತು 6 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
14/02/2021 ರಂದು ಸಂಜೆ ಸುಮಾರು 4.30 ರ ವೇಳೆ ಮೂರು ಜನ
ಆಸಾಮಿಗಳು ಒಂದು ಕಾರಿನಲ್ಲಿ ರಿಂಗ್ ರಸ್ತೆಯ ಮೂಲಕ ತಮ್ಮ ಬಳಿ ಇರುವ ರಿವಾಲ್ವರ್‍ ಅನ್ನು ಮಾರಾಟ ಮಾಡಲು ಹೋಗುತ್ತಿರುವುದಾಗಿ ಕುವೆಂಪುನಗರ ಪೊಲೀಸ್ ಇನ್ಸ ಪೆಕ್ಟರ್ ಅವರಿಗೆ ಬಂದ ಮಾಹಿತಿ ಮೇರೆಗೆ ತಮ್ಮ ಠಾಣೆಯ ಇತರೇ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನ ಲಿಂಗಾಂಬುದಿ ಪಾಳ್ಯದ ಮಳೆಗಾಲದ ಮಾರಮ್ಮ ದೇವಸ್ಥಾನದ ಬಳಿಗೆ ಬಂದು, ರಿವಾಲ್ವರ್‍ ಅನ್ನು ಮಾರಾಟ ಮಾಡಲು ಬರುತ್ತಿದ್ದ ಕಾರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ, ಕಾರಿನಲ್ಲಿದ್ದ ದಿಲೀಪ್ ಕುಮಾರ್ @ ದಿಲೀಪ ಬಿನ್ ಲೇಟ್ ಲಿಂಗೇಗೌಡ, (38), ಭುವನಹಳ್ಳಿ ಗ್ರಾಮ ಮತ್ತು ಅಂಚೆ, ಬೆಂಗಳೂರು ರಸ್ತೆ, ಹಾಸನ ತಾಲ್ಲೂಕು ಮತ್ತು ಜಿಲ್ಲೆ, ಮಂಜ ಎಂ ಬಿನ್ ಮಹದೇವ ನಾಯಕ (35), ಕಡಕೊಳ, ರೈಲ್ವೆ ಸ್ಟೇಷನ್ ಹಿಂಬಾಗ, ಮೈಸೂರು
ತಾಲ್ಲೂಕು ಮತ್ತು ಜಿಲ್ಲೆ. ಹಾಲಿ ವಿಳಾಸ: ಮಹದೇವಪುರ, 4ನೇ ಕ್ರಾಸ್, ಮಹದೇವ ಪುರ, ಮೈಸೂರುನಗರ, ರಾಜೇಂದ್ರ ಎಂ ಬಿನ್ ಲೇಟ್ ಮಹದೇವ ಶೆಟ್ಟಿ,( 29), ಹುಲ್ಲೇಪುರ ಗ್ರಾಮ ಕೆಂಪನಪುರ ಪೋಸ್ಟ್, ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ. ಹಾಲಿ ವಿಳಾಸ: ಉಪ್ಪಾರ ವಿಧ್ಯಾರ್ಥಿ ನಿಲಯ, ಟಿಟಿಎಲ್ ಕಾಲೇಜು ಬಳಿ, 1ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರುನಗರ ಎಂಬವರುಗಳನ್ನು ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಣೆ ಮಾಡಲಾಗಿ ಆರೋಪಿ ದಿಲೀಪ್ ಕುಮಾರ್ ಮೈಸೂರು ನಗರದ ಕುವೆಂಪುನಗರ, ವಿಜಯನಗರ ಹಾಗೂ ಅಶೋಕಪುರಂ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ
ಮನೆ ಕಳ್ಳತನ ಮಾಡಿದ್ದು, ಬೆಂಗಳೂರಿನ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಕಾರನ್ನು ಕಳ್ಳತನ ಮಾಡಿದ್ದು, ಕಳ್ಳತನ ಮಾಡಿಕೊಂಡು ತರುತ್ತಿದ್ದ ಚಿನ್ನಾಭರಣಗಳನ್ನು ಆತನ ಗೆಳೆಯರಾದ ಆರೋಪಿ ಮಂಜು ಮತ್ತು ರಾಜೇಂದ್ರ ಅವರುಗಳು ತಮ್ಮ ಹೆಸರಿನಲ್ಲಿ ಮುತ್ತೂಟ್ ಫಿನ್‍ ಕಾರ್ಪ್, ಅಟ್ಟಿಕಾ ಗೋಲ್ಡ್ ಕಂಪನಿಗಳಲ್ಲಿ ಗಿರವಿ ಇಟ್ಟಿರುವುದಾಗಿ ತಿಳಿಸಿದ್ದು, ವಿಜಯನಗರದ ಒಂದು ಮನೆ ಕಳ್ಳತನ ಸಮಯದಲ್ಲಿ ರಿವಾಲ್ವಾರ್ ಮತ್ತು ಗುಂಡುಗಳನ್ನು ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ತಿಳಿಸಿದರ ಮೇರೆಗೆ ರೂ. 21,47,500 ರೂ. ಮೌಲ್ಯದ 391 ಗ್ರಾಂ ತೂಕದ ಚಿನ್ನಾಭರಣಗಳು, ಒಂದು ಕಾರು, ಒಂದು ವಿದೇಶಿ ನಿರ್ಮಿತ ರಿವಾಲ್ವರ್, 6 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪತ್ತೆ ಕಾರ್ಯದಿಂದ ಕುವೆಂಪುನಗರ-2, ವಿಜಯನಗರ-2, ಅಶೋಕಪುರಂ-1, ಬೆಂಗಳೂರಿನ
ಬಾಣಸವಾಡಿ ಪೊಲೀಸ್ ಠಾಣೆಯ-1 ಪ್ರಕರಣಗಳು ಪತ್ತೆಯಾಗಿರುತ್ತವೆ. ಆರೋಪಿ ದಿಲೀಪ್‍ಕುಮಾರ್ @ ದಿಲೀಪ್ ಈತನ ಮೇಲೆ ಈ ಹಿಂದೆ ಸರಸ್ವತಿಪುರಂ, ನಜರ್‍ಬಾದ್ ಹಾಗೂ ಬೆಂಗಳೂರಿನ ಜೆ ಪಿ ನಗರ ಪೊಲೀಸ್ ಠಾಣೆಗಳಲ್ಲಿ ಮನೆಕಳ್ಳತನ ಪ್ರಕರಣಗಳು ದಾಖಲಾಗಿರುತ್ತವೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ ಗೀತಪ್ರಸನ್ನ , ಕೃಷ್ಣರಾಜ
ವಿಭಾಗದ ಎ.ಸಿ.ಪಿ.ರವರಾದ ಎಂ ಎಸ್ ಪೂರ್ಣಚಂದ್ರ ತೇಜಸ್ವಿ ಅವರ ಮಾರ್ಗದರ್ಶನದಲ್ಲಿ ಕುವೆಂಪುನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಜಿ ಸಿ ರಾಜು, ಪಿಎಸ್‍ಐ ಮಹಾವೀರ್ ಬಿಳಗಿ, ಎಎಸ್‍ಐ ದೇವಯ್ಯ, ಸಿಬ್ಬಂದಿಯವರಾದ ರಂಗಸ್ವಾಮಿ, ರಾಜೇಶ, ಹಜರತ್, ಕೃಷ್ಣ, ಮೆಹಬೂಬ್, ಚಂದ್ರಶೇಖರ, ಮಲ್ಲೂರ್, ಅರುಣ ಯೋಗೇಶ್, ಮಂಜು, ಭಗತ್, ಮಹದೇವ್, ಸಾಗರ್, ಗಿರೀಶ್, ಹರೀಶ್, ಮೇಘ್ಯನಾಯ್ಕ, ಮಹೇಂದ್ರ, ನವೀನ್ ಪುಟ್ಟಪ್ಪ, ಪೂಜಾರಿ, ನಾಗೇಶ್, ಮಾದೇಶ್ ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: