ಪ್ರಮುಖ ಸುದ್ದಿಮನರಂಜನೆ

ಏ.23ರಂದು ತೆರೆ ಕಾಣಲಿದೆ ತಮಿಳ್ನಾಡು ಸಿಎಂ ದಿ.ಜಯಲಲಿತಾ ಜೀವನ ಕುರಿತ ಚಿತ್ರ ‘ಥಲೈವಿ’

 ದೇಶ(ನವದೆಹಲಿ)ಫೆ.25:- ನಟಿ ಮತ್ತು ಖ್ಯಾತ ರಾಜಕಾರಣಿ ದಿವಂಗತ ಜಯಲಲಿತಾ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ತಮ್ಮ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ.
ಅವರು ತಮ್ಮ ಮುಂಬರುವ ಚಿತ್ರ ಥಲೈವಿ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ. ಥಲೈವಿ ಜಯಲಲಿತಾ ಅವರ ಜೀವನದ ಕುರಿತಾದ ಚಿತ್ರವಾಗಿದ್ದು, ಇದರಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಮುಖ್ಯ ಪಾತ್ರದಲ್ಲಿದ್ದಾರೆ. ಚಿತ್ರದ ನಿರ್ಮಾಪಕರು ಚಿತ್ರದ ಬಿಡುಗಡೆಯ ದಿನಾಂಕವನ್ನು ಜಯಲಲಿತಾ ಅವರ ಜನ್ಮ ವಾರ್ಷಿಕೋತ್ಸವದಂದು ಬಿಡುಗಡೆ ಮಾಡುವ ಕುರಿತು ತಿಳಿಸಿದ್ದು, ಈ ಚಿತ್ರವು 2021 ರ ಏಪ್ರಿಲ್ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
ಈ ಚಿತ್ರವು ಜಯಲಲಿತಾ ಅವರ ಜೀವನಚರಿತ್ರೆಯಾಗಿದ್ದು, ಇದರಲ್ಲಿ ಅವರ ಜೀವನದ ಕಥನವನ್ನು ತೋರಿಸಲಾಗುತ್ತದೆ. ಕಂಗನಾ ಚಿತ್ರಕ್ಕಾಗಿ ತುಂಬಾ ಶ್ರಮಿಸಿದ್ದಾರೆ.ಜಯಲಲಿತಾ ಅವರಂತೆ ಕಾಣಲು ತನ್ನ ತೂಕವನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ. ಈ ಚಿತ್ರವು ಕಳೆದ ವರ್ಷ ಬಿಡುಗಡೆಯಾಗಬೇಕಿತ್ತು ಆದರೆ ಕೊರೋನಾ ಲಾಕ್ ‌ಡೌನ್ ಕಾರಣದಿಂದಾಗಿ, ಅದರ ಶೂಟಿಂಗ್ ಬಾಕಿ ಉಳಿದುಕೊಂಡಿತ್ತು, ಲಾಕ್‌ ಡೌನ್ ಮುಗಿದ ಬಳಿಕ ನವೆಂಬರ್ 2020 ರಲ್ಲಿ ಪೂರ್ಣಗೊಂಡಿತು. ಒಟಿಟಿ ಪ್ಲಾಟ್ ‌ಫಾರ್ಮ್‌ನಲ್ಲಿ ಚಿತ್ರ ಬಿಡುಗಡೆಯಾಗುವ ಬಗ್ಗೆ ಮಾತುಕತೆ ನಡೆದಿತ್ತು ಆದರೆ ಕಂಗನಾ ಅದನ್ನು ನಿರಾಕರಿಸಿದ್ದಾರೆ.ಇದು ದೊಡ್ಡ ಪರದೆಯಲ್ಲಿ ನೋಡಬೇಕಾದ ಕಥೆಯಾಗಿದೆ, ಆದ್ದರಿಂದ ಇದನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುವುದಿಲ್ಲ ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: