ಕ್ರೀಡೆಪ್ರಮುಖ ಸುದ್ದಿ

ಹೊನಲು-ಬೆಳಕಿನ 3 ನೇ ಟೆಸ್ಟ್ ಪಂದ್ಯ : 112 ರನ್ ಗಳಿಗೆ ಇಂಗ್ಲೆಂಡ್ ಆಲೌಟ್

ದೇಶ( ಅಹ್ಮದಾಬಾದ್)ಫೆ.24:- ಅಹ್ಮದಾಬಾದ್ ನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಹೊನಲು-ಬೆಳಕಿನ 3 ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 112 ರನ್ ಗಳಿಗೆ ಆಲೌಟ್ ಆಗಿದೆ.

ಭಾರತದ ಬೌಲರ್ ಗಳಾದ ಅಶ್ವಿನ್ ಹಾಗೂ ಅಕ್ಷರ್ ಪಟೇಲ್‌ ಇಂಗ್ಲೆಂಡ್ ಆಟಗಾರರನ್ನು ಆರಂಭದಲ್ಲೇ ಕಾಡಿದರು. ಪರಿಣಾಮ ಆರಂಭಿಕ ಆಟಗಾರರ ಪೈಕಿ, 84 ಎಸೆತಗಳನ್ನು ಎದುರಿಸಿ ಇಂಗ್ಲೆಂಡ್ ತಂಡದಲ್ಲಿ ಗರಿಷ್ಠ ರನ್ (53 ರನ್) ಗಳಿಸಿದ ಜಾಕ್‌ ಕ್ರಾಲಿ ಅವರ ಶ್ರಮ ಏಕಾಂಗಿ ಹೋರಾಟವಾಯಿತು. ಜೋ ರೂಟ್ ಸೇರಿದಂತೆ ಬಹುತೇಕ ಎಲ್ಲಾ ಆಟಗಾರರು ಎರಡಂಕಿ ರನ್ ಗಳನ್ನು ದಾಟುವುದಕ್ಕೂ ಹೆಣಗಿದರು. ಪರಿಣಾಮ 48.4 ಓವರ್ ಗಳಲ್ಲಿ ಇಂಗ್ಲೆಂಡ್ ತಂಡ 112 ರನ್ ಗಳಿಸಿ ಆಲೌಟ್ ಆಯಿತು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: