ದೇಶಪ್ರಮುಖ ಸುದ್ದಿ

ಪಂಜಾಬಿ ಗಾಯಕ ಶಾರ್ದೂಲ್ ಸಿಕಂದರ್ ನಿಧನ

ದೇಶ( ಮೊಹಾಲಿ)ಫೆ.25:- ಪ್ರಸಿದ್ಧ ಪಂಜಾಬಿ ಗಾಯಕ ಶಾರ್ದೂಲ್ ಸಿಕಂದರ್ ಪಂಜಾಬ್‌ ನ ಮೊಹಾಲಿಯಲ್ಲಿ ನಿಧನರಾದರು.
ಅವರಿಗೆ 60 ವಯಸ್ಸಾಗಿತ್ತು. ಗಾಯಕರ ನಿಧನಕ್ಕೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಗಾಯಕನ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು “ಖ್ಯಾತ ಪಂಜಾಬಿ ಗಾಯಕ ಶಾರ್ದೂಲ್ ಸಿಕಂದರ್ ಅವರ ನಿಧನ ಬಹಳ ದುಃಖ ತಂದಿದೆ. ಅವರಿಗೆ ಇತ್ತೀಚೆಗೆ ಕೋವಿಡ್ ಕಾಣಿಸಿಕೊಂಡಿತ್ತು. ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಪಂಜಾಬಿ ಸಂಗೀತ ಪ್ರಪಂಚ ಅವರ ಅಗಲಿಕೆಯಿಂದ ಬಡವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು” ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: