ಪ್ರಮುಖ ಸುದ್ದಿವಿದೇಶ

ಮಲೇಷಿಯದಲ್ಲಿ ಕೊರೋನಾ ಲಸಿಕಾಭಿಯಾನಕ್ಕೆ ಪ್ರಧಾನಿ ಚಾಲನೆ

ವಿದೇಶ( ಕೌಲಾಲಂಪುರ) ಫೆ. 25:- ಕೊರೋನ ವೈರಸ್ ಸಾಂಕ್ರಾಮಿಕ ವಿರುದ್ಧದ ಲಸಿಕೆ ಅಭಿಯಾನಕ್ಕೆ ಮಲೇಷಿಯ ಚಾಲನೆ ನೀಡಿದೆ. ಅಮೆರಿಕದ ಔಷಧ ತಯಾರಿಕಾ ಸಂಸ್ಥೆ ಫೈಝರ್ ಮತ್ತು ಜರ್ಮನಿಯ ಬಯೋಎನ್‌ಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಮಲೇಷಿಯ ಬಳಸಿಕೊಂಡಿದೆ.

ಲಸಿಕೆಯ ಸುರಕ್ಷತೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವುದಕ್ಕಾಗಿ ಪ್ರಧಾನಿ ಮುಹ್ಯುದ್ದೀನ್ ಯಾಸಿನ್ ಮೊದಲಿಗರಾಗಿ ಲಸಿಕೆಯನ್ನು ಸ್ವೀಕರಿಸಿದ್ದಾರೆ.

ಮುಂದಿನ ವರ್ಷದ ಫೆಬ್ರವರಿ ವೇಳೆಗೆ ತನ್ನ 3.2 ಕೋಟಿ ಜನಸಂಖ್ಯೆಯ ಕನಿಷ್ಠ 80 ಶೇಕಡ ಮಂದಿಗೆ ಲಸಿಕೆ ನೀಡುವ ಮಹತ್ವಾಕಾಂಕ್ಷಿ ಗುರಿಯನ್ನು ಮಲೇಷಿಯ ಹೊಂದಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: