ಪ್ರಮುಖ ಸುದ್ದಿ

ದೇಶದಲ್ಲಿ ಕಳೆದ 24ಗಂಟೆಯಲ್ಲಿ 16ಸಾವಿರಕ್ಕಿಂತ ಅಧಿಕ ಕೊರೋನಾ ವೈರಸ್ ಸೋಂಕು ಪ್ರಕರಣ ಪತ್ತೆ

ಮಹಾರಾಷ್ಟ್ರದಲ್ಲಿ 8000 ಕ್ಕೂ ಹೆಚ್ಚು ಕೊರೋನಾ ಪ್ರಕರಣ

ದೇಶ(ನವದೆಹಲಿ)ಫೆ.25:- ದೇಶದಲ್ಲಿ  ಕೊರೋನಾ ವೈರಸ್ ಸೋಂಕು ಪ್ರಕರಣ  ಸಂಖ್ಯೆಯಲ್ಲಿ ಹಠಾತ್ ಏರಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ 16,738 ಸಾವಿರ ಹೊಸ ಕೊರೋನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿದ್ದು, 138 ಮಂದಿ ಸಾವನ್ನಪ್ಪಿದ್ದಾರೆ.   11,799 ಮಂದಿ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ.

ಗುಡ್ ನ್ಯೂಸ್ ಏನೆಂದರೆ  ಕಳೆದ ದಿನಗಳಲ್ಲಿ ಕೊರೋನಾದಿಂದ ಕೆಲವು ರಾಜ್ಯಗಳಲ್ಲಿ ಒಂದೇ ಒಂದು ಸಾವು ಸಂಭವಿಸಿಲ್ಲ. ಇದಕ್ಕೂ ಮುನ್ನ ಮಂಗಳವಾರ 13,742 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ. ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಈಗ ದೇಶದಲ್ಲಿನ ಒಟ್ಟು ಕೊರೋನಾ ಪ್ರಕರಣಗಳು ಒಂದು ಕೋಟಿ 10 ಲಕ್ಷ 46 ಸಾವಿರ 914 ಕ್ಕೆ ಏರಿದೆ. ಒಟ್ಟು ಒಂದು ಲಕ್ಷ 56 ಸಾವಿರ 705 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದು ಕೋಟಿ ಏಳು ಲಕ್ಷ 38 ಸಾವಿರ 501 ಮಂದಿ ಗುಣಮುಖರಾಗಿದ್ದಾರೆ.  ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷ 51 ಸಾವಿರ 708 ಕ್ಕೆ ಏರಿದೆ.

ಮಹಾರಾಷ್ಟ್ರದಲ್ಲಿ 8000 ಕ್ಕೂ ಹೆಚ್ಚು ಕೊರೋನಾ ಪ್ರಕರಣ

ಕೊರೋನಾ ವೈರಸ್ ಸೋಂಕು ಹೆಚ್ಚಳ  ಮಹಾರಾಷ್ಟ್ರದಲ್ಲಿ ಮಾತ್ರ ಕಡಿಮೆಯಾಗುತ್ತಿಲ್ಲ. ಹೆಚ್ಚಿನ ಪ್ರಕರಣಗಳು ಮತ್ತು ಸಾವುಗಳನ್ನು ಇಲ್ಲಿಯೇ ದಾಖಲಾಗುತ್ತಿದೆ.  ಕಳೆದ 24 ಗಂಟೆಗಳಲ್ಲಿ, ಮಹಾರಾಷ್ಟ್ರದಲ್ಲಿ ಸುಮಾರು ನಾಲ್ಕು ತಿಂಗಳ ನಂತರ, 8,807 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ,   ಒಟ್ಟು ಸೋಂಕಿತರ ಸಂಖ್ಯೆ 21 ಲಕ್ಷದ 21 ಸಾವಿರದ 119 ಕ್ಕೆ ಏರಿದೆ. ಅದೇ ವೇಳೆ    80 ಸೋಂಕಿತರ ಸಾವಿನ ಬಗ್ಗೆ ಮಾಹಿತಿ ಹೊರಬಂದಿದ್ದು, ಇದರಿಂದಾಗಿ ರಾಜ್ಯದಲ್ಲಿ ಸಾವಿನ ಸಂಖ್ಯೆ 51,937 ಕ್ಕೆ ಏರಿದೆ.  (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: