ಮೈಸೂರು

‘ ವಾತ್ಸಲ್ಯ ಸಿಂಧೂರ’ ಕೃತಿ ಬಿಡುಗಡೆ

ಮೈಸೂರು,ಫೆ.25:- ವೆಂಕಟಗಿರಿ ಪ್ರಕಾಶನ ಕುವೆಂಪುನಗರ, ಭಾರತ ಕನ್ನಡ ಪರಿಷತ್ತು ವಿನಾಯಕ ನಗರ ಮೈಸೂರು ವತಿಯಿಂದ ಸ್ವಾತಿ ಎಸ್ ಅವರ ‘ ವಾತ್ಸಲ್ಯ ಸಿಂಧೂರ’ ಕೃತಿ ಬಿಡುಗಡೆ ಮತ್ತು ಕವಿ ಸಮ್ಮಿಲನ ಕಾರ್ಯಕ್ರಮವನ್ನು ಶಂಕರಮಠ ರಸ್ತೆಯಲ್ಲಿರುವ ಶ್ರೀ ನಟರಾಜ ಪ್ರತಿಷ್ಠಾನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಉದ್ಘಾಟನೆ ನೆರವೇರಿಸಿದರು. ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಕೃತಿ ಬಿಡುಗಡೆಗೊಳಿಸಿದರು.

ಈ ಸಂದರ್ಭ ಭಾರತ ಕನ್ನಡ ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಡಾ.ರಾಘವೇಂದ್ರ ಕುಮಾರ್, ಕೃತಿಯ ಕರ್ತೃ ಸ್ವಾತಿ ಎಸ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ನೀ.ಗಿರಿಗೌಡ, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: