ಮೈಸೂರು

ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು

ಮೈಸೂರು,ಫೆ.25:- ಮೈಸೂರು ನಗರ ಪಾಲಿಕೆಯ ನೂತನ ಮೇಯರ್‌ಗೆ ಮೊದಲ ದಿನವೇ ಅಗ್ನಿ ಪರೀಕ್ಷೆ ಎದುರಾಗಿದೆ.

ಮೇಯರ್ ರುಕ್ಮಿಣಿ ಸದಸ್ಯತ್ವ ರದ್ದು ಕೋರಿ ಸಲ್ಲಿಸಿರುವ ಅರ್ಜಿ ಹೈಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆಯಲಿದೆ.
ವಾರ್ಡ್ ನಂಬರ್ 36 ರ ಸದಸ್ಯೆ ಆಗಿರುವ ರುಕ್ಮಿಣಿ ಮಾದೇಗೌಡ ಅವರು ಚುನಾವಣೆ ವೇಳೆ ಆಸ್ತಿ ವಿವರ ಮುಚ್ಚಿಟ್ಟ ಆರೋಪ ಮಾಡಲಾಗಿದೆ. ಈ ಸಂಬಂಧ ಕಾಂಗ್ರೆಸ್ ಕಾರ್ಪೋರೇಟರ್ ರಜಿನಿ ಅಣ್ಣಯ್ಯ ಅವರು ರುಕ್ಮಿಣಿ ಮಾದೇಗೌಡ ವಿರುದ್ಧ ದೂರು ನೀಡಿದ್ದರು. ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ದೂರು ಇದಾಗಿದೆ.
ಡಿಸೆಂಬರ್ 14, 2020ರಲ್ಲಿ ರುಕ್ಮಿಣಿ ಸದಸ್ಯತ್ವ ರದ್ದು ಮಾಡಿ ನ್ಯಾಯಾಲಯ ಆದೇಶ ಮಾಡಿತ್ತು. ಆದರೆ ರುಕ್ಮಿಣಿ ಮಾದೇಗೌಡ ಬದಲಾಗಿ ರಜಿನಿ ಅಣಯ್ಯ ಚುನಾಯಿತ ಸದಸ್ಯೆ ಎಂದು ಘೋಷಿಸಲು ಆದೇಶಿಸಿತ್ತು. ಅದರಂತೆ ರಜಿನಿಗೆ ಪ್ರಮಾಣ ಪತ್ರ ನೀಡುವಂತೆಯೂ ಆದೇಶಿಸಿದೆ. ಆ ವೇಳೆ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ರುಕ್ಷ್ಮಿಣಿ ಅವರು ಹೈಕೋರ್ಟ್ ಮೊರ ಹೋಗಿದ್ದರು. ಸದ್ಯ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ನಿನ್ನೆ ಮೇಯರ್ ಆಗಿ ಆಯ್ಕೆಯಾಗಿರುವ ರುಕ್ಮಿಣಿ ಅವರ ಸದಸ್ಯತ್ವ ಕುರಿತಂತೆ ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ಇಂದು ಅರ್ಜಿ ವಿಚಾರಣೆ ನಡೆಯಲಿದೆ. ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ರುಕ್ಮಿಣಿ ಅವರಿಗೆ ಸಂಕಷ್ಟ  ಎದುರಾಗಿದೆ. ತಪ್ಪು ಅಫಿಡೆಡವಿಟ್ ಸಾಬೀತಾದ ದಲ್ಲಿ ರುಕ್ಮಿಣಿ ಅವರು ಸದಸ್ಯತ್ವ ಕಳೆದು ಕೊಳ್ಳಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: