ಮೈಸೂರು

ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳ ದಾಳಿ : ನಾಲ್ಕು ಟನ್ ಬಟ್ಟೆ ವಶ

ಶಾದನಹಳ್ಳಿಯಲ್ಲಿ ಬೆಂಕಿ ಉಗುಳುವ ಮಣ್ಣಿಗೆ ಬಿದ್ದು ಬಾಲಕನೋರ್ವ ಇತ್ತೀಚೆಗೆ ಸಾವನ್ನಪಿರುವಂತೆ ಮೈಸೂರಿನಲ್ಲಿ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬುಧವಾರ ಕೆಲವು ಕಡೆ ಬಟ್ಟೆಗೆ ರಾಸಾಯನಿಕ ಹಾಕುವ ಘಟಕಕ್ಕೆ  ದಾಳಿ ನಡೆಸಿದ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು ನಾಲ್ಕು ಟನ್ ನಷ್ಟು ಬಟ್ಟೆ ವಶಪಡಿಸಿಕೊಂಡಿದ್ದಾರೆ.

ಮೈಸೂರಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ತಲೆ ಎತ್ತಿವೆ 25 ಕ್ಕೂ ಹೆಚ್ಚು ಅನಧಿಕೃತ ಡೈಯಿಂಗ್ ಘಟಕಗಳು ತಲೆಎತ್ತಿವೆ. ತಾಲೂಕಿನ ಕಳಲವಾಡಿ ಗ್ರಾಮದಲ್ಲಿ ಬಟ್ಟೆಗೆ ಬಣ್ಣ ಹಾಕುವ ಘಟಕವಿದೆ. ಬಟ್ಟೆಗೆ ರಾಸಾಯನಿಕ ಹಾಕುವ ನಾಲ್ಕು ಯಂತ್ರಗಳನ್ನು  ಅಳವಡಿಸಲಾಗಿದೆ. ಕೃಷಿಹೊಂಡದಲ್ಲೇ ರಾಸಾಯನಿಕಗಳ ಶೇಖರಣೆಯಾಗುತ್ತಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ರಘುರಾಂ ನೇತೃತ್ವದಲ್ಲಿ ಬುಧವಾರ  ಬೆಳಗ್ಗೆ ದಾಳಿ ನಡೆದಿದ್ದು, ಬಟ್ಟೆ, ಯಂತ್ರೋಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ. ಸರಿಸುಮಾರು ನಾಲ್ಕು ಟನ್ ನಷ್ಟು ಬಟ್ಟೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಕಳಲವಾಡಿ ಗ್ರಾಮದ ನಿವಾಸಿ ಮರೀಗೌಡ ಎಂಬುವರಿಗೆ ಸೇರಿದ ಜಮೀನಿನಲ್ಲಿ ರಾಸಾಯನಿಕ ಘಟಕವಿದೆ ಎಂದು ತಿಳಿದುಬಂದಿದೆ.  (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: