ದೇಶಪ್ರಮುಖ ಸುದ್ದಿ

ರಿಲಯನ್ಸ್ ದಿಗ್ಗಜ ಮುಖೇಶ್ ಅಂಬಾನಿ ನಿವಾಸದ ಬಳಿ ಅನುಮಾನಾಸ್ಪದ ಕಾರು ಪತ್ತೆ

ದೇಶ(ಮುಂಬೈ)ಫೆ.26:- ದಕ್ಷಿಣ ಮುಂಬೈನ ರಿಲಯನ್ಸ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಎಂಟಿಲಿಯಾ ನಿವಾಸದ ಬಳಿ ನಿನ್ನೆ ಸಂಜೆ ಅನುಮಾನಾಸ್ಪದ ಕಾರೊಂದು ಪತ್ತೆಯಾಗಿದೆ.

ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶ್ ಮುಖ್ ಈ ಮಾಹಿತಿ ನೀಡಿದ್ದು, ಅಂಬಾನಿ ನಿವಾಸದ ಬಳಿ ಸ್ಕಾರ್ಪಿಯೋ ಕಾರು ಪತ್ತೆಯಾಗಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ ಇಂದು ಸಂಜೆ ಅನುಮಾನಾಸ್ಪದ ವಾಹನ ಪತ್ತೆಯಾಗಿದೆ. ಶೀಘ್ರದಲ್ಲೇ ಪೋಲೀಸರು ಎಚ್ಚೆತ್ತಿದ್ದಾರೆ. ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (ಬಿಡಿಡಿಎಸ್) ಮತ್ತು ಇತರ ಪೊಲೀಸ್ ತಂಡಗಳು ತ್ವರಿತ ಕ್ರಮಗಳಿಗೆ ಮುಂದಾಗಿ ತಕ್ಷಣ ಸ್ಥಳಕ್ಕೆ ತಲುಪಿದವು. ವಾಹನವನ್ನು ಪರಿಶೀಲಿಸಿದಾಗ ಜಿಲೆಟಿನ್ ಕಡ್ಡಿಗಳು ಹಾಗೂ ಕೆಲ ಸ್ಫೋಟಕ ವಸ್ತುಗಳನ್ನು ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆರಂಭಿಕ ಮಾಹಿತಿಯ ಪ್ರಕಾರ, ಇದು ಯೋಜಿತವಾದ ಸ್ಫೋಟಕ ಸಾಧನವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: