ಮೈಸೂರು

ಗುತ್ತಿಗೆದಾರನ ಮೇಲೆ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ್ದಾರೆಂಬ ಆರೋಪ : ಕೆಎಸ್ ಎಫ್ ಐಸಿ ನೌಕರರಿಬ್ಬರ ವಿರುದ್ಧ ಪ್ರಕರಣ ದಾಖಲು

ಮೈಸೂರು,ಫೆ.26:- ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಯಮದ ಇಬ್ಬರು ನೌಕರರ ವಿರುದ್ಧ ಕಟ್ಟಿಗೆ ಸಾಗಿಸುವ ಗುತ್ತಿಗೆದಾರನ ಮೇಲೆ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ್ದಾರೆಂಬ ಆರೋಪದ ಮೇಲೆ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುವೆಂಪುನಗರದಲ್ಲಿರುವ ನಿಗಮದ ನೌಕರರಾದ ಮುರಳಿ ಮತ್ತು ಉಸ್ಮಾನ್ ಶೇಖ್ ಎಂಬವರ ವಿರುದ್ಧ ಐಪಿಸಿ ಸೆಕ್ಷನ್ 341, 323, 504, 506,ರೆಡ್ ವಿತ್ 34ರೀತ್ಯಾ ಪ್ರಕರಣ ದಾಖಲಿಸಲಾಗಿದೆ. ನಿಗಮಕ್ಕೆ ಸೇರಿದ ಗುತ್ತಿಗೆದಾರ ನಾಗಮಂಗಲ ನಿವಾಸಿ ಮೊಹಮ್ಮದ್ ಇಸ್ಮಾಯಿಲ್ ಪಾಷಾ ಎಂಬವರು ನನ್ನ ಲಾರಿಗಳಿಂದ ಕೆಎಸ್ ಎಫ್ ಐಸಿಯ ಒಣ ಕಟ್ಟಿಗೆಗಳನ್ನು ಸಾಗಿಸುತ್ತಿದ್ದ ಬಾಬತ್ತು ತಮಗೆ ಬರಬೇಕಿದ್ದ ಬಾಕಿ ಹಣ ಕೇಳಲು ಫೆ.18ರಂದು ನಿಗಮದ ಕಛೇರಿಗೆ ಹೋದಾಗ ಮುರಳಿ ಮತ್ತು ಉಸ್ಮಾನ್ ಶೇಖ್ ಅವರು ನನ್ನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ್ದಾರೆಂದು ಅವರು ಫೆ.25ರಂದು ನೀಡಿದ ದೂರಿನಲ್ಲಿ ಆರೋಪಿಸಿದ್ದು ಪ್ರಕರಣ ದಾಖಲಿಸಿಕೊಂಡಿರುವ ಅಶೋಕಪುರಂ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: