ಮೈಸೂರು

ಸಿ.ಸಿ.ಬಿ.ಪೊಲೀಸರಿಂದ ಕುಖ್ಯಾತ ಮನೆ ಕಳ್ಳರ ಬಂಧನ:  31,00,000 ರೂ ಮೌಲ್ಯದ   ಚಿನ್ನಾಭರಣ  ವಶ

ಮೈಸೂರು,ಫೆ.28:- ಸಿ.ಸಿ.ಬಿ.ಪೊಲೀಸರು ಕುಖ್ಯಾತ ಮನೆ ಕಳ್ಳರನ್ನು ಬಂಧಿಸಿ ಬಂಧಿತರಿಂದ 31,00,000 ರೂ ಮೌಲ್ಯದ 611 ಗ್ರಾಂ ತೂಕದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು  ವಶಪಡಿಸಿಕೊಂಡಿದ್ದಾರೆ.

ಮೈಸೂರು ನಗರದಲ್ಲಿ ವರದಿಯಾಗಿರುವ ಮನೆ ಕಳ್ಳತನ ಪ್ರಕರಣಗಳ ಪತ್ತೆ ಸಂಬಂಧ ನಗರದ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಅವರು ಮೈಸೂರು ನಗರದ ಸಿ.ಸಿ.ಬಿ.ಘಟಕದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿದ್ದು, ಈ ವಿಶೇಷ ತಂಡವು  23-02-2021 ರಂದು ಸಂಜೆ 6  ಗಂಟೆಯ ಸಮಯದಲ್ಲಿ ಕುಖ್ಯಾತ ಮನೆಗಳ್ಳರಾದ   ಫಯಾಜ್ ಅಹ್ಮದ್ @ ಚೊತ್ತ ಫಯಾಜ್, @ ಚೊತ್ತ @ಚೊತ್ತ ಫಯಾಜ್ ಬಿನ್ ದಸ್ತಗೀರ್, (54)   ಸ್ವಂತ ವಿಳಾಸ ಸಂತೆಮಾಳದ ಹತ್ತಿರ, ಉರ್ದುಸ್ಕೂಲ್ ಹಿಂದೆ, ಸರಗೂರು, ಹೆಚ್.ಡಿ,ಕೋಟೆ ತಾಲೂಕು, ಮೈಸೂರು ಜಿಲ್ಲೆ. ಹಾಲಿ ವಿಳಾಸ:-#83, ಪೋಸ್ಟಲ್ ಕಾಲೋನಿ, ರಿಂಗ್ ರಸ್ತೆ ಹತ್ತಿರ, ರಾಜೀವ್ ನಗರ, 2 ನೇ ಹಂತ, ಮೈಸೂರು ನಗರ, ಇಮ್ತಿಯಾಜ್ ಅಹಮದ್ ಬಿನ್ ಲೇ ನಜೀರ್ ಅಹಮದ್ (43), ಹಾಲಿ ವಿಳಾಸ – #2146, ಅಬುಅಜರ್ ಮಸೀದಿ ಹಿಂಭಾಗ, ಗುಪ್ತ ಸ್ಟೋರ್ ಡೌನ್, ರಾಜೀವ್ ನಗರ, 1ನೇ ಹಂತ, ಮೈಸೂರು. ಸ್ವಂತ ವಿಳಾಸ #278, ಗಣಪತಿ ದೇವಸ್ಥಾನದ ಹಿಂಭಾಗ, ಭಾರತ್ ನಗರ, ಮೈಸೂರು ಎಂಬವರುಗಳನ್ನು ಮೈಸೂರು ನಗರದ ರಿಂಗ್ ರಸ್ತೆಯ ನಾಯ್ಡು ನಗರ, ಜಂಕ್ಷನ್‍ ನಲ್ಲಿ ವಶಕ್ಕೆ ತೆಗೆದುಕೊಂಡು ಪರಿಶೀಲಿಸಿದಾಗ ಈ ಆರೋಪಿಗಳು ಇದ್ದ ಸ್ಯಾಂಟ್ರೋ ಕಾರಿನಲ್ಲಿ ಮನೆಗಳ್ಳತನ ಮಾಡಲು ಉಪಯೋಗಿಸುತ್ತಿದ್ದ ಪರಿಕರಗಳು ಹಾಗೂ ಕಳ್ಳತನ ಮಾಡುವಾಗ ತಪ್ಪಿಸಿಕೊಳ್ಳಲು ಸಲುವಾಗಿ ಬಳಸುತ್ತಿದ್ದ ಪಿಸ್ತೂಲ್ ಮಾದರಿಯ ಏರ್ ಗನ್ ಹೊಂದಿದ್ದು, ಈ ಸಂಬಂಧ ಆರೋಪಿಗಳನ್ನು ಕೂಲಂಕುಶವಾಗಿ ವಿಚಾರಣೆಗೆ ಒಳಪಡಿಸಿದಾಗ ಸದರಿ ಆರೋಪಿಗಳು  10-12-2020 ರಂದು ರಾತ್ರಿ ಮೈಸೂರು ನಗರ ಎನ್ ಆರ್ ಪೊಲೀಸ್ ಠಾಣಾ ಸರಹದ್ದಿನ ಸುಭಾಷ್ ನಗರ, 1 ನೇ ಮೇನ್, ಮನೆ ನಂ:47 ರಲ್ಲಿ ಬೆಂಕಿ ಅಪಘಾತವಾಗಿದ್ದು, ಈ ಸಂಬಂಧ ಮನೆಯವರು ಬೀಗ ಹಾಕಿಕೊಂಡು ಹೋಗಿದ್ದನ್ನು ಗಮನಿಸಿ, ಸದರಿ  ಮನೆಯ ಕಿಟಕಿಯನ್ನು ಮುರಿದು ಮನೆಯೊಳಗೆ ಪ್ರವೇಶಿಸಿ ಸುಮಾರು 800 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ 60,000  ರೂ ನಗದು ಹಣವನ್ನು ಕಳವು ಮಾಡಿದ್ದಾಗಿ ಒಪ್ಪಿಕೊಂಡಿರುತ್ತಾರೆ.

ಸದರಿ ಆರೋಪಿಗಳನ್ನು ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನಂತರ ಪೊಲೀಸ್ ವಶಕ್ಕೆ ಪಡೆದು, ಆರೋಪಿಗಳು ಕದ್ದು ತಂದ ಚಿನ್ನಾಭರಣಗಳನ್ನು ವಿಲೇವಾರಿ ಮಾಡಿದ್ದ – 3)ಮೊಹಮದ್ ಪರ್ವೀಜ್ @ ಪರ್ವೀಜ್ ಬಿನ್ ರಹಮಾನ್ ಷರೀಫ್ ( 41), ಮರಿಯಮ್ ಜ್ಯೂಯಲರ್ಸ್‍ನಲ್ಲಿ ಚಿನ್ನದ ವ್ಯಾಪಾರ, #2759, ಸುಲ್ತಾನ್ ಪಾರ್ಕ್ ರಸ್ತೆ, ಮಂಡಿ ಮೊಹಲ್ಲಾ ಮೈಸೂರು. ಎಂಬವನನ್ನು  26-02-2021 ರಂದು ದಸ್ತಗಿರಿ ಮಾಡಿ,   ಆರೋಪಿಗಳು ನೀಡಿದ ಸ್ವ ಹೇಳಿಕೆಗಳ ಮೇರೆಗೆ ಉದಯಗಿರಿ ಶಾಖೆಯ ಮುತ್ತೂಟ್ ಫೈನಾನ್ಸ್ ಲಿಮಿಟೆಡ್‍ನಲ್ಲಿ ಗಿರವಿ ಇಟ್ಟಿದ್ದ ಹಾಗೂ ಇತರೇ ಕಡೆಗಳಲ್ಲಿ ವಿಲೇವಾರಿ ಮಾಡಿದ್ದ ಚಿನ್ನಾಭರಣಗಳು ಸೇರಿದಂತೆ   31,00,000ರೂ. ಮೌಲ್ಯದ 611 ಗ್ರಾಂ ತೂಕದ ಚಿನ್ನಾಭರಣಗಳು, ಆರೋಪಿಗಳು ಕೃತ್ಯಕ್ಕೆ ಬಳಸುತ್ತಿದ್ದ ಒಂದು ಸ್ಯಾಂಟ್ರೋ ಕಾರು, ಮನೆಗಳ್ಳತನ ಮಾಡಲು ಬಳಸುತ್ತಿದ್ದ ಪರಿಕರಗಳನ್ನು ಅಮಾನತು ಪಡಿಸಿಕೊಂಡಿದ್ದಾರೆ.

1 ನೇ ಆರೋಪಿಯು ಈ ಹಿಂದೆ ಸುಮಾರು 24 ಸ್ವತ್ತಿನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಸಜಾ ಬಂಧಿಯಾಗಿದ್ದನೆಂದು ಹಾಗೂ 3ನೇ ಆರೋಪಿಯು ಇದೇ ರೀತಿ ಬೇರೆ ಪ್ರಕರಣಗಳಲ್ಲಿ ಕಳುವು ಮಾಲು ಸ್ವೀಕರಿಸಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದನೆಂಬ ಅಂಶ ತಿಳಿದು ಬಂದಿರುತ್ತದೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ.  ಗೀತಪ್ರಸನ್ನ , ಸಿ.ಸಿ.ಬಿ. ಘಟಕದ ಎ.ಸಿ.ಪಿ. ಸಿ.ಕೆ. ಅಶ್ವತ್ಥನಾರಾಯಣರವರ ಮಾರ್ಗದರ್ಶನದಲ್ಲಿ ನೇತೃತ್ವದಲ್ಲಿ ಸಿ.ಸಿ.ಬಿ.ಯ ಇನ್ಸ್‍ಪೆಕ್ಟರ್ ಆರ್. ಜಗದೀಶ್, ಎ.ಎಸ್.ಐ.ಗಳಾದ ಡಿ.ಜಿ. ಚಂದ್ರೇ ಗೌಡ, ಅಸ್ಗರ್ ಖಾನ್, ಸಿಬ್ಬಂದಿಗಳಾದ ರಾಮಸ್ವಾಮಿ, ಗಣೇಶ್, ಎಂ.ಆರ್. ಚಿಕ್ಕಣ್ಣ, ಶಿವರಾಜು, ಲಕ್ಷ್ಮಿಕಾಂತ, ಯಾಕೂಬ್ ಷರೀಪ್, ಸಲೀಂ ಪಾಷ, , ಆನಂದ್, ಅನಿಲ್, ಸಿ.ಎಂ.ಮಂಜು, ಗುರುದೇವಾರಾಧ್ಯ ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: