ಮೈಸೂರು

ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಮದ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ : ಜಿ.ಟಿ.ದೇವೇಗೌಡ

ಮೈಸೂರು,ಫೆ.28:-   ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಮದ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಾಸಕ‌ ಜಿ.ಟಿ.ದೇವೇಗೌಡ ತಿಳಿಸಿದರು.
ಅವರು ಇಂದು ಮೈಸೂರು ತಾಲೂಕು ಹೂಟಗಳ್ಳಿ ಗ್ರಾಮಾಭಿವೃದ್ಧಿ ಶ್ರೀ ರಾಮ‌ ಸೇವಾ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಗ್ರಾಮ ಮಟ್ಟದಲ್ಲಿ ಸೇವಾ ಸಂಘಗಳು ಸಭೆಯನ್ನು ಸೇರಿ, ಗ್ರಾಮಕ್ಕೆ ಅವಶ್ಯಕತೆ ಇರುವ ಕೆಲಸಗಳ‌ ಬಗ್ಗೆ ಚರ್ಚಿಸಿ ಕೆಲಸ ಮಾಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು. ಸೇವಾ ಸಂಘದವರು ಗ್ರಾಮದಲ್ಲಿರುವ ಅಂಗವಿಕಲರು, ವೃದ್ದರಿಗೆ ಮಾಸಾಶನ ಮಾಡಿಸಿಕೊಡಬೇಕು, ಗ್ರಾಮದ ಸೇವಾ ಸಂಘಗಳು ಸೇವೆ ಮಾಡುವುದರ ಮೂಲಕ ಗ್ರಾಮದ ಅಭಿವೃದ್ಧಿ ಗೆ ಶ್ರಮಿಸುವಂತೆ ತಿಳಿಸಿದರು.
ಶಾಂತಿ, ತಾಳ್ಮೆಯಿಂದ ಗ್ರಾಮದ ಕೆಲಸವನ್ನು ನಿರ್ವಹಿಸುವಂತೆ ಸಂಘದ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು. ಸಮಾರಂಭದಲ್ಲಿ ಮಾಜಿ ಶಾಸಕರಾದ ವಾಸು, ಸಂಘದ ಅಧ್ಯಕ್ಷರಾದ ಪ್ರಕಾಶ ಟಿ. ಸಲಹೆಗಾರಾದ ಶಿವಣ್ಣ, ಸಂಘದ ಕಾರ್ಯದರ್ಶಿ ಗಳಾದ   ರಾಮಚಂದ್ರ, ಮುಖಂಡರಾದ ಹೆಚ್.ಎನ್.ಸುರೇಶ್, ಜವರಪ್ಪ, ಚಿಕ್ಕನಿಂಗಣ್ಣ, ಸಿದ್ದೇಗೌಡರು, ಹೆಚ್.ಎನ್ ಸುರೇಶ್ ವೆಂಕಟರಾಮೇಗೌಡ, ತಾ.ಪಂ.ಸದಸ್ಯರಾದ ವಿಜಯ್ ಕುಮಾರ್,ಸಂಘದ ಪದಾಧಿಕಾರಿಗಳಾದ ಮಹದೇವು, ಚಿಕ್ಕಲಿಂಗೇಗೌಡ, ಮರೀಗೌಡ, ದೊಡ್ಡಲಿಂಗೇಗೌಡ, ಮಹದೇವು, ಮಹದೇವು ವಿ., ರಾಮಕೃಷ್ಣ, ಸಿದ್ದರಾಜು, ನಿಂಗರಾಜು ಉಮಾಶಂಕರ್, ಕುಮಾರ್, ವಿಜಿಕುಮಾರ್, ನಾರಾಯಣ, ಕೃಷ್ಣ, ವೆಂಕಟೇಶ, ಬೋರೇಗೌಡ, ದೇವರಾಜು, ಶಿವಕುಮಾರ, ಬೋರೇಗೌಡ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳು, ಗ್ರಾಮದ ಮುಖಂಡರುಗಳು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: