ಮೈಸೂರು

ಅಂದಿಗೂ-ಇಂದಿಗೂ ಆನೆ ನಡೆದದ್ದೇ ದಾರಿ : ಕಂಬಿಯನ್ನೇ ದಾಟಿ ಬಂದ ಕಾಡಾನೆಗಳು

ಆನೆ ನಡೆದದ್ದೆ ದಾರಿ ಅಂತ ತಿಳಿದವರು ಹೇಳುತ್ತಾರೆ ಎಷ್ಟು ಜನರು ಈ ಮಾತನ್ನು ನಂಬುತ್ತಿದ್ದರೋ ಇಲ್ಲವೋ ಗೊತ್ತಿಲ್ಲ.  ಆದರೆ ಈ ಮಾತನ್ನು ನಂಬುವಂತೆ ಮಾಡಿರುವುದು ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕಾಡಾನೆ ಮತ್ತು ನಾಗರಹೊಳೆ ವ್ಯಾಪ್ತಿಯ ಕಾಡಾನೆಗಳು.

ಯಾಕೆಂದರೆ ಆನೆಗಳು ಆಹಾರ ಅರಸಿ ನಾಡಿಗೆ ಬರುತ್ತಿದ್ದು, ಅವುಗಳ ಹಾವಳಿಯನ್ನು ತಡೆಯಲು ಕಾಡಿನಂಚಿನಲ್ಲಿ ರೈಲ್ವೆ ಕಂಬಿಗಳನ್ನು ಅಳವಡಿಸಲಾಗಿದೆ. ಆದರೆ  ರೈಲ್ವೆ ಕಂಬಿಗಳನ್ನೇ ಆನೆಗಳು ಸಲೀಸಾಗಿ ದಾಟಿ ಬಂದಿವೆ. ರೈಲ್ವೆ ಕಂಬಿಗಳನ್ನು ಅಳವಡಿಸಲಾಗಿದ್ದು, ಇನ್ನು ಆನೆಗಳ ಹಾವಳಿ ನಿಲ್ಲಲಿದೆ. ಗ್ರಾಮಸ್ಥರು ನೆಮ್ಮದಿಯಿಂದ ಉಸಿರಾಡಬಹುದು ಎಂದು  ಏಪ್ರಿಲ್ 16ರಂದು ಸಿಟಿಟುಡೆ ವರದಿ ಮಾಡಿತ್ತು.   ಆದರೆ ಇಂದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ. ಯಾಕೆಂದರೆ ಆನೆಗಳು ನಾಡಿಗೆ ಬರಬಾರದೆಂದು ನಿರ್ಮಿಸಲಾದ ರೈಲ್ವೆ ಕಂಬಿಗಳನ್ನೂ ದಾಟಿ ನಾಡಿಗೆ ಧಾವಿಸಿ ಬರುತ್ತಿವೆ. ಸರ್ಕಾರ ಹಾಗೂ ಅರಣ್ಯ ಇಲಾಖೆಯ ಲೆಕ್ಕಾಚಾರ ತಲೆಕೆಳಗಾಗಿದೆ.  ಆನೆಗಳು ಕಂಬಿಯನ್ನು ದಾಟಲು ಮೊದಲು ಸ್ವಲ್ಪ ಪ್ರಯಾಸ ಪಟ್ಟಂತೆ ಕಂಡರೂ ಬಳಿಕ ಸಲೀಸಾಗಿ ಕಂಬಿಗಳಿಂದ ಇಳಿದು ಇವು ತಮಗಾಗಿ ಹಾಕಿದ್ದಲ್ಲವೇನೋ ಎಂಬಂತೆ ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿರುವುದು ಅಲ್ಲಿನ ನಿವಾಸಿಗಳನ್ನು ಮತ್ತೆ ಚಿಂತೆಗೆ ದೂಡಿದೆ. ಆನೆ ದಾಳಿ ತಡೆಗೆ ಪರಿಹಾರವೇ ಇಲ್ಲವೇ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿರುವುದು ಮಾತ್ರ ವಿಪರ್ಯಾಸವೇ ಸರಿ.  (ಎಸ್.ಎನ್-ಎಸ್.ಎಚ್)

 

 

Leave a Reply

comments

Related Articles

error: