ದೇಶಪ್ರಮುಖ ಸುದ್ದಿ
ಶಂಕಿತ ಭಯೋತ್ಪಾದಕರ ಗುಂಡೇಟಿನಿಂದ ಗಾಯಗೊಂಡಿದ್ದ ಯುವಕ ಸಾವು
ದೇಶ( ಶ್ರೀನಗರ)ಮಾ.1:- ಫೆಬ್ರವರಿ 17ರಂದು ಶಂಕಿತ ಭಯೋತ್ಪಾದಕರಿಂದ ಗುಂಡಿನ ದಾಳಿಗೆ ತುತ್ತಾಗಿದ್ದ ಜನಪ್ರಿಯ ಉಪಹಾರ ಗೃಹದ ಮಾಲಕನ ಪುತ್ರ ಶ್ರೀನಗರದ ಆಸ್ಪತ್ರೆಯಲ್ಲಿ ರವಿವಾರ ಮೃತಪಟ್ಟಿದ್ದಾರೆ.
ಶಂಕಿತ ಭಯೋತ್ಪಾದಕರು ತೀರಾ ಸಮೀಪದಿಂದ ಅಕಾಶ್ ಮೆಹ್ರಾ ಅವರಿಗೆ ಗುಂಡು ಹಾರಿಸಿದ್ದರು. ಇದರಿಂದ ಗಂಭೀರ ಗಾಯಗೊಂಡಿದ್ದ ಅವರನ್ನು ಇಲ್ಲಿನ ಎಸ್ಎಂಎಚ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿ 1990ರಿಂದ ಸಕ್ರಿಯವಾಗಿರುವ ಜಾನ್ ಬಾಝ್ ಪಡೆ ಈ ದಾಳಿಯ ಹೊಣೆ ಹೊತ್ತಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)