ಮೈಸೂರು

ಪ್ರಜಾನೀತಿ ಜಾರಿ ಮಾಡಿ ಆದರ್ಶ ಆಡಳಿತ ನಡೆಸಿದ ಕೀರ್ತಿ ಮೈಸೂರು ಸಂಸ್ಥಾನಕ್ಕೆ ಸಲ್ಲಬೇಕು:ಪ್ರೊ.ಸಿ.ಪಿ.ಸುನಿತಾ

ದೇಶವನ್ನಾಳಿದ ರಾಜ ಮನೆತನಗಳಲ್ಲಿ ಮೈಸೂರು ಸಂಸ್ಥಾನ ಅತ್ಯಂತ ಪ್ರಮುಖವಾಗಿದ್ದು ಪ್ರತಿಯೊಬ್ಬರು ಮೈಸೂರು ಸಂಸ್ಥಾನದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಪ್ರಾಂಶುಪಾಲೆ ಪ್ರೊ.ಸಿ.ಪಿ.ಸುನಿತಾ ಸಲಹೆ ನೀಡಿದರು.
ಬುಧವಾರ ಮೈಸೂರಿನ ಮಹಾರಾಜ ಕಾಲೇಜಿನ ಜೂನಿಯರ್  ಬಿಎ ಹಾಲ್‍ನಲ್ಲಿ ಆಯೋಜಿಸಿದ್ದ ಪ್ರೊ.ಡಿ.ಎಸ್ ಅಚ್ಚುತರಾವ್ ಅವರ ಬರವಣಿಗೆ ವರ್ತಮಾನದಲ್ಲಿ ಅದರ ಪ್ರಸ್ತುತತೆ ಕುರಿತ ವಿಚಾರಣ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಭಾರತ ಬ್ರಿಟಿಷರ ಕಪಿಮುಷ್ಟಿಗೆ ಸಿಲುಕಿ ನಲುಗುತ್ತಿದ್ದ ಕಾಲದಲ್ಲೇ ಮೈಸೂರು ಸಂಸ್ಥಾನ ಉತ್ತಮವಾಗಿ ಆಡಳಿತ ನಡೆಸುತ್ತಿತ್ತು. ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಮೊದಲೇ ಮೈಸೂರು ಪ್ರಾಂತ್ಯದಲ್ಲಿ ಪ್ರಜಾನೀತಿ ಜಾರಿಗೆ ತಂದು ಆದರ್ಶ ಆಡಳಿತ ನಡೆಸಿದ ಕೀರ್ತಿ ಮೈಸೂರು ಸಂಸ್ಥಾನಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಮೈಸೂರು ಇಂದು ವಿಶ್ವ ಭೂಪಟದಲ್ಲಿ ಎತ್ತರದ ಸ್ಥಾನದಲ್ಲಿ ನಿಲ್ಲಲು  ಮುಖ್ಯ ಕಾರಣ ಮೈಸೂರು ಸಂಸ್ಥಾನ.  17 ಹಾಗೂ 18ನೇ ಶತಮಾನದಲ್ಲಿ ಯದುವಂಶದ ಅರಸರು ಮೈಸೂರನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ದರು. ಕೈಗಾರಿಕೆ, ನೀರಾವರಿ, ಶಿಕ್ಷಣ ಹಾಗೂ ಪಾರಂಪರಿಕತೆಗೆ ಹೆಚ್ಚು ಒತ್ತು ನೀಡಿ ಅಭಿವೃದ್ಧಿಯ ಹರಿಕಾರರಾಗಿ ಹೊರಹೊಮ್ಮಿದರು. ಅವರ ಪರಿಶ್ರಮದಿಂದಲೇ ಇಂದು ಮೈಸೂರು ಸುಂದರ ನಗರವಾಗಿ ಬೆಳೆದು ನಿಂತಿದ್ದು ಅಂತಹ ಸಂಸ್ಥಾನದ ಇತಿಹಾಸವನ್ನು ಯುವಕರು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ಶ್ರೀಕಂಠ, ಪ್ರೊ.ಕೆ. ಸದಾಶಿವ, ಪ್ರಸನ್ನ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: