ಮೈಸೂರು

ನೈರುತ್ಯ ರೈಲ್ವೆ ವತಿಯಿಂದ ಪ್ರಶಸ್ತಿ ಪ್ರದಾನ

ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ 233 ಕಾರ್ಮಿಕರು ಹಾಗೂ ಅಧಿಕಾರಿಗಳಿಗೆ ನೈರುತ್ಯ ರೈಲ್ವೆ ವತಿಯಿಂದ ಬುಧವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ಎನ್‍ಐಇ ವಜ್ರಮಹೋತ್ಸವ ಕ್ರೀಡಾ ಸಂಕೀರ್ಣದಲ್ಲಿ ನೈರುತ್ಯ ರೈಲ್ವೆ ಕೇಂದ್ರೀಯ ಕಾರ್ಯಾಗಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನಲೆಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುವ 18 ತಂಡ ಹಾಗೂ ಪ್ರತಿ ವರ್ಷ ನೀಡುವ 4 ಪಾರಿತೋಷಕ ಪ್ರಶಸ್ತಿಗಳನ್ನು ಮುಖ್ಯ ಕಾರ್ಖಾನೆ ಪ್ರಬಂಧಕ ನೀರಜ್ ಜೈನ್ ವಿತರಿಸಿದರು.
ಕಾರ್ಯಾಗಾರದ ದಾಖಲೆ ನಿರ್ವಹಣೆಯಲ್ಲಿ ಕೃಷ್ಣ ಮೂರ್ತಿ, ಕೈಗಾರಿಕ ಭದ್ರತೆಯಾಗಿ ಎಸ್‍ಎಸ್‍ಇ ರಾಘವೇಂದ್ರ, ಎಂ.ಆರ್.ಚಂದ್ರಶೇಖರ್, ಸ್ವಚ್ಛತೆಗಾಗಿ ಟಿ.ಡಿ.ಅನಿಲ್ ಕುಮಾರ್, ಉಗ್ರಾಣ ನಿರ್ವಹಣೆಗಾಗಿ ಸಿ.ಕೃಷ್ಣಮೂರ್ತಿ, ಚಕ್ರ ತಯಾರಿಕಾ ಘಟಕದ ಮೊಹಮ್ಮದ್ ಸಿದ್ದೀಖ್, ತಂತ್ರಜ್ಞ ಎ.ವಿನ್ಸೆಂಟ್, ನಾನ್ ಸ್ಟಾಕ್ ಇನ್‍ಡೆಂಟ್ ಸೆಲ್‍ನ ಎಸ್.ಈಶ್ವರಮ್ಮ ಹಾಗೂ ಮೈಸೂರು ಕಾರ್ಯಾಗಾರಕ್ಕೆ ತಂಡದ ಪ್ರಶಸ್ತಿಯೂ ಲಭಿಸಿದೆ.
ಕಾರ್ಯಕ್ರಮದಲ್ಲಿ ಡಿಸಿಡಬ್ಲ್ಯೂ ರವೀಂದ್ರ, ಡಿಪಿಒ ರಾಜು ಹಾಗೂ ಶೀಖಾ ನೀರಜ್ ಜೈನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: