ಮೈಸೂರು

ವೈಚಾರಿಕ ಪ್ರಜ್ಞೆಯ ಸರ್ವಜ್ಞ : ಡಾ. ಜಯಪ್ಪ ಹೊನ್ನಾಳಿ

ಮೈಸೂರು,ಮಾ.1:- ಸರ್ವಜ್ಞನು ವೈಚಾರಿಕ ಪ್ರಜ್ಞೆಯುಳ್ಳವನಾಗಿದ್ದು, ಮಾನವೀಯ ಮೌಲ್ಯಗಳನ್ನು ಬಿತ್ತಿದವನು ಎಂದು ಕವಿಗಳಾದ ಡಾ. ಜಯಪ್ಪ ಹೊನ್ನಾಳಿ ಹೇಳಿದರು.
ಮೈಸೂರು 2ನೇ ಹಂತದ ಜೆಎಸ್‍ಎಸ್ ಬಡಾವಣೆಯಲ್ಲಿ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಏರ್ಪಡಿಸಿದ್ದ 274ನೆಯ ‘ಶಿವಾನುಭವ ದಾಸೋಹ’ ಕಾರ್ಯಕ್ರಮದಲ್ಲಿ ‘ವಚನಬ್ರಹ್ಮ ಸರ್ವಜ್ಞ’ ವಿಷಯ ಕುರಿತು ಉಪನ್ಯಾಸ ನೀಡಿದರು, ಸರ್ವಜ್ಞನು ನಿರಂತರ ಜಂಗಮಪ್ರಜ್ಞೆಯ ಪರಮಾತ್ಮನಂತೆ ಬದುಕಿದವನು. ಜೀವನದಲ್ಲಿ ಸಾಕಷ್ಟು ಅಪಮಾನ ಮತ್ತು ನೋವನ್ನುಂಡರೂ ಸಮಾಜವನ್ನು ತಿದ್ದುವ ಕೆಲಸದಲ್ಲಿ ಹಿಂಜರಿಯಲಿಲ್ಲ. ಆತನ ವಚನಗಳನ್ನು ಅರ್ಥೈಸಿಕೊಂಡು, ಜೀವನದಲ್ಲಿ ಅಳವಡಿಸಿಕೊಂಡು ಬಾಳಬೇಕು ಎಂದು ತಿಳಿಸಿದರು.
ಚಾಮರಾಜನಗರ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷರಾದ ಶಿವಕುಮಾರ್‍ ಅವರು ಸರ್ವಜ್ಞ ಸಮಾಜದಲ್ಲಿನ ಮೂಢನಂಬಿಕೆ, ಅನ್ಯಾಯದ ವಿರುದ್ಧ ಹೋರಾಡಿದರು. ನಾವು ಅಂಧಾನುಕರಣೆಯನ್ನು ಬಿಟ್ಟು ಜೀವನದಲ್ಲಿ ನೀತಿಸಂಹಿತೆಯನ್ನು ಅಳವಡಿಸಿಕೊಂಡು ಜೀವನ ನಡೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಜಿಜ್ಞಾಸುಗಳು, 2ನೇ ಹಂತದ ಜೆಎಸ್‍ಎಸ್ ಬಡಾವಣೆಯ ನೂರಾರು ಕುಟುಂಬಗಳ ಸದಸ್ಯರು ಭಾಗವಹಿಸಿದ್ದರು. ಶ್ರೀ ಶಿವರಾತ್ರೀಶ್ವರ ಭಜನಾ ಮಂಡಳಿಯವರು ಭಜನೆ ಮಾಡಿದರು. ಮಲ್ಲಿಕಾರ್ಜುನಸ್ವಾಮಿ ಪ್ರಾರ್ಥಿಸಿದರು. ಮುದ್ದುಬಸವಣ್ಣ ಸ್ವಾಗತಿಸಿದರು. ಪಿ.ಎಂ. ಮಹದೇವಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಂದರರಾಜು ವಂದಿಸಿದರು. ಸಿದ್ಧಲಿಂಗಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: