ಪ್ರಮುಖ ಸುದ್ದಿ

ಡ್ಯಾಂ ಮೇಲೆ ಯುವಕ ಜೀಪ್ ಓಡಿಸಿದ್ದ ಪ್ರಕರಣ : ಇನ್ಸಪೆಕ್ಟರ್ ಎಸ್.ಬಿ.ಸ್ವಾಮಿ ಅಮಾನತು

ರಾಜ್ಯ(ಮಂಡ್ಯ)ಮಾ.2:-  ಕೆಆರ್‌ ಎಸ್‌ ಡ್ಯಾಂನ ಭದ್ರತಾ ಮೇಲುಸ್ತುವಾರಿಯಾಗಿದ್ದ ಕೆಎಸ್ ಐಎಸ್‌ ಎಫ್ ಇನ್ಸಪೆಕ್ಟರ್‌ ಎಸ್‌.ಬಿ.ಸ್ವಾಮಿ ಅವರನ್ನು  ಅಮಾನತು  ಮಾಡಲಾಗಿದೆ.

ಕಾರಣವಿಷ್ಟೇ ಅವರು ಕೆ ಆರ್‌ ಎಸ್‌ ನಿರ್ಬಂಧ ಪ್ರದೇಶದಲ್ಲಿ ಯುವಕ ಪೊಲೀಸ್‌ ಜೀಪ್‌ ಓಡಿಸಲು ಸಾಥ್‌ ನೀಡಿದ್ದರು ಎನ್ನಲಾಗಿದೆ.      ಪೊಲೀಸ್ ವಾಹನವನ್ನು ಡ್ಯಾಂ ಮೇಲೆ ಯುವಕನಿಗೆ  ಚಲಾಯಿಸಲು ಬಿಟ್ಟಿದ್ದರು. ಅಷ್ಟೇ ಅಲ್ಲದೇ  ಅದನ್ನು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು.    ಪೊಲೀಸ್ ಇಲಾಖೆ ಆಂತರಿಕ ಭದ್ರತಾ ವಿಭಾಗದಿಂದ ಸ್ವಾಮಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: