Uncategorizedನಮ್ಮೂರುಮೈಸೂರು

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ನೂತನ ಪದಾಧಿಕಾರಿಗಳ ಪದಗ್ರಹಣ

ಮೈಸೂರು

ಭಾರತೀಯ ಜನತಾ ಪಾರ್ಟಿಯ ಘಟಕದ ವತಿಯಿಂದ ಕೃಷ್ಣರಾಜ ಕ್ಷೇತ್ರದ ಹಿಂದುಳಿದ ವರ್ಗಗಳ ಮೋರ್ಚಾದ ಪದಗ್ರಹಣ ಮತ್ತು ಕಾರ್ಯಕಾರಣಿ ಸಭೆಯನ್ನು ಜೆ.ಎಲ್.ಬಿ ರಸ್ತೆಯಲ್ಲಿರುವ ಆರಾಧ್ಯ ಮಹಾಸಭಾ ಸಭಾಂಗಣದಲ್ಲಿ ಮಾಜಿ ಸಚಿವ ಎಸ್.ಎ.ರಾಮದಾಸ್ ರವರು ಚಾಲನೆ ನೀಡಿದರು.

ನಂತರ ವೇದಿಕೆಯ ಕಾರ್ಯಕ್ರಮದಲ್ಲಿ ಈ ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಹೋಟೆಲ್ ನಲ್ಲಿ ಚಹಾ ಮಾರುತಿದ್ದ ವ್ಯಕ್ತಿಯನ್ನು ಭಾರತದ ಅಗ್ರ ಸ್ಥಾನವಾದ ಪ್ರಧಾನಮಂತ್ರಿಯನ್ನಾಗಿ ಮಾಡಿದ ಹಿರಿಮೆ  ಭಾರತೀಯ ಜನತಾ ಪಾರ್ಟಿಗೆ ಸಲ್ಲುತ್ತದೆ ಎಂದು ಮಾಜಿಸಚಿವ ಎಸ್.ಎ.ರಾಮದಾಸ್ ತಿಳಿಸಿ ಹಿಂದುಳಿದ ವರ್ಗದ ಯುವಕರು ಅತ್ಯಂತ ಸ್ವಾವಲಂಬಿಗಳಾಗಲು ಕೇಂದ್ರ ಸರ್ಕಾರದ ಯೋಜನೆ ಸಾಲ ಸೌಲಭ್ಯ ಪಡೆಯಬಹುದು. ಹಿಂದುಳಿದ ವರ್ಗದವರಿಗೆ ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ  ಸಹಾಯ ಮಾಡುವ ನಿಟ್ಟಿನಲ್ಲಿ  ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಪ್ರವರ್ತರಾಗಬೇಕೆಂದು ಎಂದು ಆಶಿಸಿದರು.

ನಂತರ ನಗರಧ್ಯಕ್ಷರಾದ ಡಾ.ಮಂಜುನಾಥ್ ರವರ ಸಮ್ಮುಖದಲ್ಲಿ ಕ್ಷೇತ್ರದ ಅಧ್ಯಕ್ಷ- ಯೊಗಾನಂದ, ಪ್ರಧಾನ ಕಾರ್ಯದರ್ಶಿ -ಸಂತೋಷ , ಉಪಾಧ್ಯಕ್ಷ- ನಾಗರಾಜು, ಆನಂದ್, ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು  ಸುಮಾರು 50 ಜನ ಯುವಕರು ಕಾಂಗ್ರೆಸ್ ಪಕ್ಷ ವನ್ನು ತ್ಯಜಿಸಿ ರಾಮದಾಸ್ ರವರ ನೇತ್ರತ್ವದಲ್ಲಿ ಬಿ.ಜೆ.ಪಿ ಸೇರಿದ್ದರು.

ವೇದಿಕೆಯಲ್ಲಿ ಮಾಜಿ ಸಚಿವರಾದ ರಾಮದಾಸ್,ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ್, ನಗರ ಅಧ್ಯಕ್ಷ ಮಂಜುನಾಥ್,ಕ್ಷೇತ್ರದ ಅಧ್ಯಕ್ಷ ಬಿ.ವಿ.ಮಂಜುನಾಥ, ಉಪಮಹಾಪೌರ ವನಿತಾ ಪ್ರಸನ್ನ,ನಗರಪಾಲಿಕೆ ಸದಸ್ಯರಾದ ಶಂಕರ್,ಮಾ.ವಿ.ರಾಮಪ್ರಸಾದ್, ಶಿವಕುಮಾರ್, ಸೀಮಾ ಪ್ರಸಾದ್,ಜಗದೀಶ್, ನಗರ ಅಧ್ಯಕ್ಷ ಬಿ.ಕೆ.ಮಂಜುನಾಥ, ಕ್ಷೇತ್ರದ ಅಧ್ಯಕ್ಷ ಯೋಗಾನಂದ,ಪ್ರಧಾನಕಾರ್ಯದರ್ಶಿ ಸಂತೋಷ ಉಪಸ್ಥಿತರಿದ್ದರು.

Leave a Reply

comments

Related Articles

error: