ಕರ್ನಾಟಕಪ್ರಮುಖ ಸುದ್ದಿಮೈಸೂರು

ಒಕ್ಕಲಿಗರಿಗೆ ಮಿಸಲಾತಿ ಒತ್ತಾಯಕ್ಕೆ ನನ್ನ ಬೆಂಬಲವಿಲ್ಲ : ಸಚಿವ ಸಿ.ಪಿ.ಯೋಗೇಶ್ವರ್

ಮೀಸಲಾತಿ ಕೇಳಲು ನಿಮಗೆ ನಾಚಿಕೆಯಾಗೋಲ್ಲ ಮೀಸಲಾತಿ ಕೇಳಿದವರ ವಿರುದ್ಧ ಸಿಡಿದೆದ್ದ ಸಂಸದ ಶ್ರೀನಿವಾಸ್ ಪ್ರಸಾದ್

ಮೈಸೂರು,ಮಾ.2:- ಪ್ರವಾಸೋದ್ಯಮ  ಸಚಿವರಾದ ಸಿ .ಪಿ.ಯೋಗೇಶ್ವರ ಅವರು ಲೋಕಸಭಾ ಸದಸ್ಯರಾದ ಶ್ರೀನಿವಾಸಪ್ರಸಾದ್ ಅವರನ್ನು ಅವರ  ಜಯಲಕ್ಷ್ಮಿಪುರಂ ನಲ್ಲಿರುವ ನಿವಾಸದಲ್ಲಿ ಭೇಟಿ ಮಾಡಿದರು
ಶ್ರೀನಿವಾಸಪ್ರಸಾದ್ ಭೇಟಿ ನಂತರ  ಮಾತನಾಡಿದ ಸಚಿವರು ಪ್ರಸಾದ್ ಹಾಗೂ ನನ್ನ ನಡುವಿನ ಸಂಬಂದ ಹಳೆಯದು. ಶ್ರೀನಿವಾಸ್ ಪ್ರಸಾದ್ ಅವರ ಆಶೀರ್ವಾದ ಪಡೆಯಲು ಬಂದಿದ್ದೆ. ಸೈನಿಕ ಸಿನೆಮಾ ಮಾಡಬೇಕಾದರೆ ಕಾರ್ಗಿಲ್ ನಲ್ಲಿ ಸಿನೆಮಾ ಮಾಡಲು ಸಹಕಾರ ನೀಡಿದ್ದರು.  ಅಂದು ಅವರು ಕೇಂದ್ರ ಸಚಿವರಾಗಿದ್ದರು. ಸರ್ಕಾರ ಬಂದಾಗಲೂ ಪ್ರಸಾದ್ ರ ಮಾರ್ಗದರ್ಶನ ಇತ್ತು. ಮೈಸೂರಿನ ಪ್ರವಾಸೋದ್ಯಮದ ಬಗ್ಗೆ ಸಲಹೆ ಪಡೆದುಕೊಂಡಿದ್ದೇನೆ. ನನ್ನ ಪ್ರಸಾದ್ ಅವರ ನಡುವಿನ ಭೇಟಿ ಸೌಹಾರ್ದವಷ್ಟೇ ಎಂದರು.

ವಿಶ್ವನಾಥ್ ಭೇಟಿ ಮಾಡುತ್ತೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರನ್ನು ಭೇಟಿ ಮಾಡಲು ನನಗೆ ಯಾವುದೇ ಕೀಳರಿಮೆ ಇಲ್ಲ. ಅವರು ಇಂದು ಸಿಕ್ಕರೆ ನಾನು ಭೇಟಿಯಾಗುತ್ತೇನೆ. ನಮಗೆ ವೈಯುಕ್ತಿಕ ಟೀಕೆಗಳ ಬಗ್ಗೆ ಮಾತಾಡಲು ಆಸಕ್ತಿ ಇಲ್ಲ. ಅವರು ಹಿರಿಯರಿದ್ದಾರೆ, ಆರೋಪ ಪ್ರತ್ಯಾರೋಪ ಮಾಡೋದ ಸಹಜ. ಅವರು ನನ್ನ ಮೇಲೆ‌ ಆರೋಪ‌ ಮಾಡಿದ್ರು ನನಗೆ ಯಾವುದೇ ಬೇಸರ ಇಲ್ಲ. ಸಮಯ ಸಂದರ್ಭದಲ್ಲಿ ಮಾತ್ರ ಕೆಲವೊಂದು ಮಾತು ಬರುತ್ತೆ. ಅದು ರಾಜಕೀಯದಲ್ಲಿ ಸರ್ವೇ ಸಾಮಾನ್ಯ. ವಿಶ್ವನಾಥ್ ಅವರು ಭೇಟಿಗೆ ಸಿಕ್ಕರೆ ಖಂಡಿತ ಭೇಟಿಯಾಗುತ್ತೇನೆ ಎಂದರು. ನಮಗೆ ವೈಯುಕ್ತಿಕ ಟೀಕೆಗಳ ಬಗ್ಗೆ ಮಾತಾಡಲು ಆಸಕ್ತಿ ಇಲ್ಲ. ಅವರು ಹಿರಿಯರಿದ್ದಾರೆ, ಆರೋಪ ಪ್ರತ್ಯಾರೋಪ ಮಾಡೋದು ಸಹಜ.
ಅವರು ನನ್ನ ಮೇಲೆ‌ ಆರೋಪ‌ ಮಾಡಿದರೂ ನನಗೆ ಯಾವುದೇ ಬೇಸರ ಇಲ್ಲ. ಸಮಯ ಸಂದರ್ಭದಲ್ಲಿ ಮಾತ್ರ ಕೆಲವೊಂದು ಮಾತು ಬರುತ್ತೆ. ಅದು ರಾಜಕೀಯದಲ್ಲಿ ಸರ್ವೇ ಸಾಮಾನ್ಯ. ವಿಶ್ವನಾಥ್ ಅವರು ಭೇಟಿಗೆ ಸಿಕ್ಕರೆ ಖಂಡಿತ ಭೇಟಿಯಾಗುತ್ತೇನೆ ಎಂದರು.

ಒಕ್ಕಲಿಗರ ಮೀಸಲಾತಿಗೆ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ ಒಕ್ಕಲಿಗರಿಗೆ ಮಿಸಲಾತಿ ಒತ್ತಾಯಕ್ಕೆ ನನ್ನ ಬೆಂಬಲವಿಲ್ಲ ಎಂದರು.

ಕುಮಾರಸ್ವಾಮಿ ಅವರು ನನ್ನ ಬಗ್ಗೆ ಬಹಳ ಕೇವಲವಾಗಿ ಮಾತಾಡುತ್ತಾರೆ. ನಾನು ನನ್ನ ರಾಜಕೀಯ ಅಸ್ತಿತ್ವಕ್ಕೆ ಹೋರಾಟ ಮಾಡ್ತಿದ್ದೇನೆ. ಕುಮಾರಸ್ವಾಮಿ ಏನೇ‌ ಮಾತಾಡಿದ್ರು ನಾನು ವೈಯುಕ್ತಿಕವಾಗಿ ಹೇಳಿಕೆ‌ ಕೊಡಲ್ಲ. ಕುಮಾರಸ್ವಾಮಿ ಅವರ ರಾಜಕೀಯ ಧೋರಣೆ ಮಾತ್ರ ವಿರೋಧ ಮಾಡ್ತಾ ಇದ್ದೀನಿ. ಪರಿಷತ್‌ನಲ್ಲಿ ಬಿಜೆಪಿ ಜೊತೆ, ಮೈಸೂರಲ್ಲಿ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ತಾರೆ. ಅವರ ಈ ಇಬ್ಬಂದಿ‌ತನದ ನೀತಿಯನ್ನು ಮಾತ್ರ ನಾನು ವಿರೋಧ ಮಾಡ್ತಿದ್ದೇನೆ. ಅದು ತಪ್ಪು ಅಂದರೆ ನಾನೇನು ಮಾಡೋಕ್ಕೆ ಆಗಲ್ಲ. ದಿನೇ‌ ದಿನೇ ಜೆಡಿಎಸ್ ಜನಾಭಿಪ್ರಾಯ ಕಳೆದುಕೊಂಡಿದೆ.
ಮಂಡ್ಯ ಹಾಗೂ ತುಮಕೂರಿನಲ್ಲಿ‌ ಸೋತಾಗ ಅವರಿಗೆ ಅದು ಗೊತ್ತಾಗಿದೆ. ಬಿಜೆಪಿಯ ಸಚಿವರ ಮನೆ ಬಾಗಿಲಿಗೆ ಜೆಡಿಎಸ್‌ನವರು ಅಲೆದಾಡುತ್ತಿದೆ. ಸಿಎಂ ಕೂಡ ಅವರಿಗೆ ಸಹಾಯ ಮಾಡುತ್ತಿದ್ದಾರೆ. ಹಾಗಾಗಿ ಇದನ್ನ ಪಕ್ಷದ ವೇದಿಕೆಯಲ್ಲಿ ಮಾತಾಡುತ್ತೇನೆ ಅಷ್ಟೇ ಎಂದು ತಿಳಿಸಿದರು.

ಸಂವಿಧಾನ ಬದ್ಧವಾಗಿ ಯಾರಿಗೆ ಏನ್ ಸಿಗಬೇಕು ಅದೆ ಇನ್ನು ಧಕ್ಕಿಲ್ಲ. ಸಮಾಜದಲ್ಲಿ ಇನ್ನು ಶೋಷಿತ ವರ್ಗಕ್ಕೆ‌ ಮೀಸಲಾತಿ ಸರಿಯಾಗಿ ಸಿಕ್ಕಿಲ್ಲ. ಮೊದಲು ಅಂತಹ ಅಶಕ್ತರಿಗೆ ಮೀಸಲಾತಿ ಸಿಗಬೇಕು. ಅದನ್ನ‌ ಬಿಟ್ಟು ಎಲ್ಲ ಇರೋರು ಶಕ್ತಿ ಪ್ರದರ್ಶನ‌ ಮಾಡಿದ್ರೆ ಏನರ್ಥ. ಆ ರೀತಿ ಶಕ್ತಿ ಪ್ರದರ್ಶನ ಮಾಡೋದಕ್ಕೆ ನಾನು ವೈಯುಕ್ತಿಕವಾಗಿ ಒಪ್ಪಲ್ಲ. ಹಾಗಾಗಿ ಮೇಲ್ವರ್ಗಕ್ಕೆ ಮೀಸಲಾತಿಗೆ ನನ್ನ ಬೆಂಬಲ ಇಲ್ಲ ಎಂದರು.

ನನ್ನ ಕುಟುಂಬದಿಂದ ಯಾರೂ ರಾಜಕೀಯಕ್ಕೆ ಬರಲ್ಲ.   ಕುಟುಂಬ ರಾಜಕಾರಣ ನಾನು ಮಾಡಲ್ಲ. ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯಲು ಕರೆದುಕೊಂಡು ಬಂದಿದ್ದೆ. ಹಾಗೆಯೇ ಪ್ರಸಾದ್ ಸರ್ ಭೇಟಿ ಮಾಡಿಸಲು ಬಂದಿದ್ದೆ. ನನ್ನ ಮಗ ರಾಜಕೀಯಕ್ಕೆ ಬರಲ್ಲ ಎಂದು ಸ್ಪಷ್ಟಪಡಿಸಿದರು. ಪುತ್ರ ಶ್ರವಣ್ ಜೊತೆ ಶ್ರೀನಿವಾಸ್ ಪ್ರಸಾದ್ ಮನೆಗೆ ಬಂದಿದ್ದರು.

ಇದೇ ವೇಳೆ ಸಂಸದ ಶ್ರೀನಿವಾಸ್ ಪ್ರಸಾದ್ ಮಾತನಾಡಿ  ಯಾರ್ರೀ ಅದು ಈಶ್ವರಪ್ಪ ವಿಶ್ವನಾಥ್ ? ಯಾವುದೋ ವೇದಿಕೆ ಮೇಲೆ ನಿಂತ್ಕೊಂಡು ಜನ ಸೇರಿಸಿ ಮಿಸಲಾತಿ ಕೇಳೋಕೆ ಆಗುತ್ತಾ. ಆ ವಿಶ್ವನಾಥ್ ದೇಶಕ್ಕೆಲ್ಲ ಮಾತನಾಡ್ತಾನೆ ಅವನಿಗೆ ಗೊತ್ತಾಗೊಲ್ವಾ. ಬೀದಿಯಲ್ಲಿ ನಿಂತು ಮೀಸಲಾತಿ ಮಾತನಾಡೋದಲ್ಲ ಎಂದು ಕಿಡಿಕಾರಿದರು. ಮೀಸಲಾತಿಗೆ ಬಗ್ಗೆ ನಾನು ಮಾತನಾಡುವಾಗ ಸರಿಯಾಗಿ ಉತ್ತರ ಕೊಡಬೇಕು. ಸುದೀರ್ಘವಾಗಿ ರಾಜಕಾರಣ ಮಾಡಿರುವವನು ನಾನು. ಮೀಸಲಾತಿ ಪ್ರಶ್ನೆ ಕೇಂದ್ರದ ಮುಂದೆ ಇರುತ್ತೆ. ಎಸ್‌ಟಿಗೆ ಕೊಡಬೇಕೋಬೇಡ್ವೋ ಅನ್ನೋದನ್ನು ಕೇಂದ್ರ ತೀರ್ಮಾನ ಮಾಡುತ್ತೆ‌. ರಾಜ್ಯ ಸರ್ಕಾರ ಶಿಫಾರಸ್ಸು ಮಾತ್ರ ಮಾಡಬೇಕು. ತಜ್ಞರ ಸಮಿತಿ ನೇಮಕ ಮಾಡಬೇಕು. ಇದನ್ನು ಮಾಡಿದವರು ಹಾವನೂರು ಒಬ್ಬರೇ. ನಾಯಕ ಸಮಾಜಕ್ಕೆ ಎಸ್.ಟಿ.ಸೇರಿಸಲು ಕಾನೂನು ರೀತಿಯಲ್ಲಿ ಹೋರಾಟ ಮಾಡಿದ್ರು.
ಆದ್ರೆ ಇವರುಗಳು ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಮೀಸಲಾತಿ ಕೇಳಲು ನಿಮಗೆ ನಾಚಿಕೆಯಾಗೋಲ್ಲ ಎಂದು ಮೀಸಲಾತಿ ಕೇಳಿದವರ ವಿರುದ್ದ ಸಿಡಿದೆದ್ದು, ಕುರುಬರು, ಪಂಚಮಸಾಲಿ ಮಿಸಲಾತಿ ಕೇಳಿದವರಿಗೆ ಪ್ರಸಾದ್ ಟಾಂಗ್ ನೀಡಿದರು. 10 ಕೋಟಿ ಕೊಟ್ಟು ಹೆಲಿಕ್ಯಾಪ್ಟರ್ ತಗೊಳೋರು ಮಿಸಲಾತಿ ಕೇಳ್ತೀರಾ?. ಈ ರಾಜ್ಯಕ್ಕೆ ಸಿಎಂ ಆಗ್ತಿರಾ. ಅಂತ ಜನಾಂಗಕ್ಕೆ ಮೀಸಲಾತಿ ಕೊಡಬೇಕಾ.
ಮೈಮೇಲೆ ಬಟ್ಟೆ ಇಲ್ಲದವರು ಕೇಳಲಿ. ಆನೆ ಮೇಯಿಸಿಕೊಂಡು ಕಾಡಲ್ಲಿ ಇರೋರು ಕೇಳಿದ್ರೆ ಅದನ್ನು ಒಪ್ಪೋಣ. ದೊಡ್ಡ ದೊಡ್ಡ ಬ್ಯುಸಿನೆಸ್ ‌ಮ್ಯಾನ್ ‌ಗಳು  ಉಪಮುಖ್ಯಮಂತ್ರಿಗಳಾಗಿದ್ದರು. ರಿಯಲ್ ಎಸ್ಟೇಟ್ ಮಾಡುವವರಿಗೆ ಮೀಸಲಾತಿ ಕೊಡಬೇಡಿ. ಆ ಎಂಟಿಬಿ 10 ಕೋಟಿ ಕೊಟ್ಟು ಹೆಲಿಕ್ಯಾಪ್ಟರ್ ತಗೋಳೋಕೆ ಆಗುತ್ತೆ. ಇಂತವರೇಲ್ಲ ಮೀಸಲಾತಿ ಕೇಳ್ತಿರಾ?. ಅದ್ಯಾರೋ 2ಎ ಗೆ ಸೇರಿಸಿ ಅಂತಾರೆ. ಕುಳಿತಿರುವ ಜಾಗದಲ್ಲಿ 2ಎಗೆ ಸೇರಿಸಲು ಆಗುತ್ತಾ. ಇವೆಲ್ಲದರ ಬಗ್ಗೆ ಸರ್ಕಾರ ಸ್ಪಷ್ಟವಾದ ಹೇಳಿಕೆ ಕೊಡಬೇಕು. ಸಿಎಂ ಹಾಗೂ ಕಾನೂನು ಸಚಿವರು ಇದನ್ನು ಸ್ಪಷ್ಟಪಡಿಸಬೇಕು.
ಒಂದೆ ಹೇಳಿಕೆಯಲ್ಲಿ ಎಲ್ಲವನ್ನೂ ಮುಗಿಸಬೇಕು‌. ನಮ್ಮ ಇತಿ ಮಿತಿ ಏನಿದೆ ಅಂತ ಹೇಳಿಕೆ ಕೊಟ್ಟು ಮುಗಿಸಬೇಕು. ನಾನು ಈ ವಿಚಾರವನ್ನು ಸೂಕ್ಮವಾಗಿ ಹೇಳಿಕೆ ಕೊಡ್ತಿದ್ದೀನಿ. ಯಾರನ್ನು 2ಎ ಸೇರಿಸುತ್ತಿದ್ದೀರಾ ಹಾಗಾದ್ರೆ 2ಎ ನಲ್ಲಿ ಇರೋರು ಎಲ್ಲಿಗೆ ಹೋಗಬೇಕು.
50% ಗಿಂತ ಜಾಸ್ತಿ ಇರಬಾರದು ಅಂತ ಸುಪ್ರೀಂಕೋರ್ಟ್ ಹೇಳಿದೆ. ಇದನ್ನು ಮುಂದುವರೆಸಬಾರದು ಎಂದರು.

ಕೇಂದ್ರದಲ್ಲಿ ಇವತ್ತು ಕಾಂಗ್ರೆಸ್ ಇಬ್ಭಾಗ ಆಗಿದೆ. ರಾಜ್ಯದಲ್ಲಿ ಸಹ ಇವತ್ತು ಡಿಕೆಶಿ ಹಾಗೂ ಸಿದ್ದರಾಮಯ್ಯ ಗುಂಪು ಆಗಿದೆ. ಇದನ್ನು ನಾನು ರಾಜಕೀಯವಾಗಿ ಉಪಯೋಗಪಡಿಸಿಕೊಳ್ಳಬೇಕು. ಇದನ್ನು ನಾನು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದೇನೆ. ನೂರಕ್ಕೆ ನೂರು ಭಾಗ 2023ಕ್ಕೆ ಬಿಜೆಪಿ ಅಧಿಕಾರಕ್ಕೆ ಬರಲಿದೆ.
ಇದು ನನಗೆ ಸಾಕಷ್ಟು ವಿಶ್ವಾಸ ಇದೆ ಎಂದರು. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: