ಮೈಸೂರು

ಮೈಸೂರು ನಗರದ ಅಭಿವೃದ್ಧಿ ಕುರಿತು ಸಿಎಂ ಬಿಎಸ್ ವೈ ಗೆ ಶಾಸಕ ತನ್ವೀರ್ ಸೇಠ್ ಪತ್ರ

ಮೈಸೂರು,ಮಾ.3:-   ರಾಜ್ಯ ಬಜೆಟ್ ನ್ನು ಮಾರ್ಚ್ 8 ರಂದು ಮುಖ್ಯಮಂತ್ರಿ  ಬಿಎಸ್ ಯಡಿಯೂರಪ್ಪ ಮಂಡಿಸಲಿದ್ದು, ಅದಕ್ಕಾಗಿ ಪೂರ್ವ ತಯಾರಿ  ನಡೆಸುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ  ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಶಾಸಕ ತನ್ವೀರ್ ಸೇಠ್   ಮೈಸೂರು ನಗರದ ಅಭಿವೃದ್ಧಿ ಕುರಿತು ಪತ್ರ ಬರೆದು ಸಲಹೆ ನೀಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ  ಪತ್ರ ಬರೆದಿರುವ ಶಾಸಕ ತನ್ವೀರ್ ಸೇಠ್, ಮೈಸೂರು ನಗರದ ಅಭಿವೃದ್ಧಿ ವಿಚಾರ ಕುರಿತು 30ಕ್ಕೂ ಹೆಚ್ಚು ವಿಚಾರಗಳನ್ನು ಪ್ರಸ್ತಾಪಿಸಿ ಬೇಡಿಕೆ ಇಟ್ಟಿದ್ದಾರೆ.

ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ, ಪ್ರತ್ಯೇಕ ಜಲಮಂಡಳಿ ರಚನೆ, ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ, ಸಂಚಾರ ನಿಯಮ ಉಲ್ಲಂಘನೆಯಿಂದ ಸಂಗ್ರಹಿಸಿದ ದಂಡ ಮೊತ್ತದ ಶೇ.50ರಷ್ಟು ಹಣವನ್ನು ಸಂಚಾರ ಅಭಿವೃದ್ಧಿಗೆ ಬಳಕೆ, ಪೊಲೀಸ್ ಅಕಾಡೆಮಿ ಮತ್ತು ತರಬೇತಿ ಸ್ಥಳಾಂತರಕ್ಕೆ ನಗರದ ಹೊರ ವಲಯದಲ್ಲಿ 100 ಎಕರೆ ಜಾಗ ಮೀಸಲು, ನರಸಿಂಹರಾಜ ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ, ರೈಲ್ವೆ ಗೂಡ್ಸ್‌ ಶೆಡ್ ಬಳಿ ಲಾರಿ ಟರ್ಮಿನಲ್ ನಿರ್ಮಾಣ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮುಂದೆ ಪತ್ರದ ಮೂಲಕ ಇರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: