ಕರ್ನಾಟಕಪ್ರಮುಖ ಸುದ್ದಿ

ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಕಾರು: ಜವಾಬ್ದಾರಿ ಹೊತ್ತ ಸಂಘಟನೆಯ ಪತ್ರ ಸುಳ್ಳು; ಮುಂಬೈ ಪೊಲೀಸರು

ಮುಂಬೈ,ಮಾ.3-ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ ವಾಹನ ನಿಲ್ಲಿಸಿದ ಹೊಣೆ ಹೊತ್ತುಕೊಂಡು ಜೈಶ್ ಉಲ್ ಹಿಂದ್ ಹೆಸರಿನಲ್ಲಿ ಬಂದಿದ್ದ ಪತ್ರ ಸುಳ್ಳು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಟೆಲಿಗ್ರಾಂ ಆಪ್ ನಲ್ಲಿ ಪತ್ರವನ್ನು ಕಳೆದ ಭಾನುವಾರ ಪೋಸ್ಟ್ ಮಾಡಲಾಗಿದ್ದು, ಕ್ರಿಪ್ಟೊ ಕರೆನ್ಸಿಯಲ್ಲಿ ಪಾವತಿ ಮಾಡಬೇಕೆಂದು ಒತ್ತಾಯಿಸಿ ಹಣ ನೀಡಲು ವೆಬ್ ಪೇಜ್ ನ ಲಿಂಕ್ ನ್ನು ನೀಡಲಾಗಿತ್ತು. ಅದೇ ದಿನ ಸಾಯಂಕಾಲ ಮತ್ತೊಂದು ಸಂಘಟನೆ ನಿಜವಾದ ಜೈಶ್ ಉಲ್ ಹಿಂದ್ ಸಂಘಟನೆ, ಮೊದಲ ಸಂದೇಶ ಕಳುಹಿಸಿದ್ದು ತಾನಲ್ಲ, ಅಂಬಾನಿ ಮನೆಯ ಬಳಿ ಕಂಡುಬಂದ ಕಾರಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡಿತು.

ನಂತರ ಮುಂಬೈ ಅಪರಾಧ ದಳದ ಪೊಲೀಸರು ನಡೆಸಿದ ತನಿಖೆಯಿಂದ ಮೊದಲ ಪತ್ರದಲ್ಲಿ ನೀಡಿದ ಲಿಂಕ್ ನಲ್ಲಿ ಯಾವುದೇ ವೆಬ್ ಪೇಜ್ ಇಲ್ಲ ಎಂದು ಹೇಳಿಕೊಂಡಿದೆ. ಮೊದಲ ಪತ್ರ ಕೇವಲ ಹುಸಿ ತಮಾಷೆಯಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಂಕೇಶ್ ಅಂಬಾನಿಯ ಮುಂಬೈ ಬಹುಮಹಡಿ ನಿವಾಸವಾದ ‘ಆಂಟಿಲಿಯಾ’ ಬಳಿಯ ಕಾರ್ಮೈಕಲ್ ರಸ್ತೆಯಲ್ಲಿ ಜೆಲೆಟಿನ್ ತುಂಬಿದ್ದ ಕಾರು ಪತ್ತೆಯಾಗಿತ್ತು. ಜೊತೆಗೆ ಕಾರಿನಲ್ಲಿ ಬೆದರಿಕೆ ಹಾಕಿದ ಪತ್ರವೊಂದು ಸಿಕ್ಕಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್,ಎಂ.ಎನ್)

Leave a Reply

comments

Related Articles

error: