ಪ್ರಮುಖ ಸುದ್ದಿಮನರಂಜನೆ

ಬಾಲಿವುಡ್ ನ ತಾಪ್ಸಿ ಪನ್ನು, ಅನುರಾಗ್ ಕಶ್ಯಪ್ ಸೇರಿದಂತೆ ಹಲವು ತಾರೆಯರ ಮನೆಯ ಮೇಲೆ ಐಟಿ ಅಧಿಕಾರಿಗಳ ದಾಳಿ

ದೇಶ(ಮುಂಬೈ)ಮಾ.3:- ಮುಂಬೈನಲ್ಲಿ ನಟಿ ತಾಪ್ಸಿ ಪನ್ನು, ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಮತ್ತು ವಿಕಾಸ್ ಬಹ್ಲ್ ಅವರ ಮನೆಗಳ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಇವರಷ್ಟೇ ಅಲ್ಲದೇ  ಮಧು ಮಂಟೇನಾ ಸೇರಿದಂತೆ ಅನೇಕ  ದಿಗ್ಗಜರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ. ವರದಿಗಳ ಪ್ರಕಾರ, ತೆರಿಗೆ ವಂಚನೆ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ ಎನ್ನಲಾಗಿದೆ.

ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಫ್ಯಾಂಟಮ್ ಚಿತ್ರಗಳಲ್ಲಿ ವಿಕಾಸ್ ಬಹ್ಲ್, ಅನುರಾಗ್ ಕಶ್ಯಪ್ ಮತ್ತು ಮಧು ಮೆಂಟೇನಾ ಅವರ ಮನೆಯ ಮೇಲೆ ದಾಳಿಗಳು ನಡೆದಿವೆ ಎಂಬ ವರದಿಗಳಿವೆ. ಮೂವರೂ ಈ ಪ್ರೊಡಕ್ಷನ್ ಹೌಸ್‌ ನ ಸ್ಥಾಪಕರಾಗಿದ್ದರೆ ಅನುರಾಗ್ ಕಶ್ಯಪ್ ಇದರ ಮಾಲೀಕರು. ತಾಪ್ಸಿ ಪನ್ನು ಅವರ ಮನೆಯ ಮೇಲೆ ದಾಳಿ ನಡೆಸಲು ಕಾರಣ ಇನ್ನೂ ತಿಳಿದುಬಂದಿಲ್ಲ. ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಮುಂಬೈ ಮತ್ತು ಪುಣೆಯ 22 ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಡೆಯುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: