
ಮೈಸೂರು
ಸ್ವದೇಶಿ, ಸಾವಯವ ಮಳಿಗೆ ಉದ್ಘಾಟನೆ
ಮೈಸೂರು, ಮಾ.3:- ಪ್ರಧಾನ ಮಂತ್ರಿಗಳ ಸ್ವದೇಶಿ ಬಳಸಿ ದೇಶ ಉಳಿಸಿ ಅಭಿಯಾನದಲ್ಲಿ ಇಂದು ಕನ್ನಡ ಹೋರಾಟ ಗಾರರು ಹಾಗೂ ಸಮಾಜ ಸೇವಕರಾದ ಡಾ ಶಾಂತರಾಜೇಅರಸ್ ಪಿ ರವರು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಸ್ವದೇಶಿ, ಸಾವಯವ ಮಳಿಗೆಯನ್ನು ಮಾಜಿ ಸಚಿವರು, ಬಿ ಜೆ ಪಿ ಮುಖಂಡರಾದ ವಿಜಯ ಶಂಕರ್ ಉದ್ಘಾಟಿಸಿದರು.
ದೇಶದ ಜನರೆಲ್ಲ ಆರ್ಗನಿಕ್, ಆಯುರ್ವೇದ ಪದಾರ್ಥಗಳನ್ನು ಬಳಸಿ ದೇಶ ಉಳಿಸಿ ಎಲ್ಲಾ ಆರೋಗ್ಯ ವಂತರಾಗಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಂಸ್ಕೃತಿ ಪೋಷಕರು ಹಾಗೂ ಹಿರಿಯ ಸಮಾಜ ಸೇವಕರಾದ ಡಾ. ರಘುರಾಂ ಕೆ ವಾಜಪೇಯಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮ ದಲ್ಲಿ ಕರ್ನಾಟಕ ಸೇನಾ ಪಡೆ ಅಧ್ಯಕ್ಷರು ತೇಜೇಶ್ ಲೋಕೇಶ್ ಗೌಡ, ವಿ. ಜಯಣ್ಣ, ಅರಸು ಸಂಘದ ಅಧ್ಯಕ್ಷರು, ಮಂಜು ರಾಮಚಂದ್ರ ಕಿರಣ್, ಪ್ರಭು ಶಂಕರ್ ಮುಂತಾದವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)