ಮೈಸೂರು

ಸ್ವಂತ ಉದ್ಯೋಗ ಮಾಡುವ ಸಲುವಾಗಿ ಮಹಿಳೆಯರಿಗೆ ಹೊಲಿಗೆಯಂತ್ರ ವಿತರಣೆ

ಮೈಸೂರು,ಮಾ.3:-  ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವಾಡ್೯ 65ರ ಶ್ರೀರಾಪುರದ ಭಾಗದಲ್ಲಿ ಬಡತನರೇಖೆಯಲ್ಲಿರುವಂತ ವಾರ್ಡಿನ 30 ಮಹಿಳೆಯರಿಗೆ ನಗರಪಾಲಿಕೆ ಸದಸ್ಯರಾದ ಗೀತಾಶ್ರೀಯೋಗನಂದಾ ಅವರ ಅನುದಾನದಡಿಯಲ್ಲಿ ಸ್ವಂತ ಉದ್ಯೋಗ ಮಾಡುವ ಸಲುವಾಗಿ ಅವರಿಗೆ ಹೊಲಿಗೆಯಂತ್ರವನ್ನು   ಶಾಸಕರಾದ ಎಸ್ ಎ ರಾಮದಾಸ್ ಅವರ ನೇತೃತ್ವದಲ್ಲಿ  ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿ ಮಾತನಾಡಿದ   ಶಾಸಕರು ವಿಶೇಷವಾಗಿ ವಾರ್ಡ್ ನಂ.65 ರಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ವೃತ್ತಿಪರವಾದ ಕೆಲಸವನ್ನು ಮಾಡುತ್ತೇವೆ ಎನ್ನುವವರಿಗೆ ನಗರ ಪಾಲಿಕೆ ಅಡಿಯಲ್ಲಿ ಟೈಲರಿಂಗ್ ಮಿಷನ್ ಗಳನ್ನು ಟೈಲರಿಂಗ್ ಕಲಿತ 30 ಜನಕ್ಕೆ ಕೊಡುವ ಕೆಲಸಕ್ಕೆ ಚಾಲನೆ ನೀಡಿದ್ದೇವೆ. ಇನ್ನೂ ಇದರಲ್ಲೇ ಹೆಚ್ಚು ಸಾಧನೆ ಮಾಡಬೇಕು ಎನ್ನುವವರಿಗೆ ಕೋ.ಆಪರೇಟಿವ್ ಸೆಕ್ಟರ್ ಅನ್ನು ಪ್ರಾರಂಭ ಮಾಡಲಿದ್ದೇವೆ. ಇದರ ಅಡಿಯಲ್ಲಿ ಯುನಿಫಾರ್ಮ್ ಗಳು, ಹಾಗೂ ಇತರ ಬಟ್ಟೆಗಳನ್ನು ಹೊಲಿಯಲು ಹೆಚ್ಚು ಹೆಚ್ಚು ಆರ್ಡರ್ ಗಳು ಬರುತ್ತವೆ. ಮನೆಯಲ್ಲಿಯೇ ಕುಳಿತು ದುಡಿಯುವ ಯೋಜನೆ ಇದಾಗಿದೆ . ಪ್ರಧಾನಿ ಮೋದಿಯವರ ಆತ್ಮನಿರ್ಭರ ಕಲ್ಪನೆಗೆ ಇದು ಒತ್ತು ನೀಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಗೀತಾಶ್ರೀ ಯೋಗಾನಂದ್, ನಗರಪಾಲಿಕೆ ಹೆಚ್ಚುವರಿ ಆಯುಕ್ತರಾದ ಶಶಿಕುಮಾರ್,ವಲಯ 2 ರ ಸಹಾಯಕ ಆಯುಕ್ತರಾದ ನಂಜುಂಡೇಗೌಡ, ಸಹಾಯಕ ಅಭಿಯಂತರರಾದ ದೀಪಕ್, ಆರೋಗ್ಯ ಪರಿವೀಕ್ಷಕರಾದ ಬಸವರಾಜ್, ನಗರಪಾಲಿಕಾ ಅಧಿಕಾರಿಗಳಾದ ಪ್ರಸಾದ್, ಜಯರಾಮ್, ವಾರ್ಡ್ ನ ಬಿಜೆಪಿ ಮುಖಂಡರಾದ ಯೋಗಾನಂದ್, ಗಿರೀಶ್, ಸತೀಶ್, ಜಯಂತಿ , ನಂಜುಂಡಸ್ವಾಮಿ, ಜಗದೀಶ್, ಶಿವಪ್ಪ, ಚಿನ್ನಸ್ವಾಮಿ, ಮಂಜು ಹಾಗೂ ಇನ್ನಿತರ ಮುಖಂಡರು ಹಾಜರಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: