ಮೈಸೂರು

ಮೃಗಾಲಯ ಪ್ರಾಣಿಗಳ ದತ್ತು ಸ್ವೀಕಾರ

ಮೈಸೂರು. ಮಾ 3:- ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲಿ ಬೆಂಗಳೂರಿನ ನೀಲ್ ಗುಪ್ರ ಅವರು ರೂ.7.500 ಪಾವತಿಸಿ ನೀಲಿ ಮತ್ತು ಹಳದಿ ಮೆಕಾವ್, ಬೆಂಗಳೂರಿನ ಮಿಥಿ ಆರ್ ಗುಪ್ತ ಅವರು ರೂ.3.500 ಪಾವತಿಸಿ ಬಿಳಿ ನವಿಲು.ಹಾಗೂ ಮೈಸೂರಿನ ಬೃಂದ ಎ ಅವರು ರೂ.2,000 ಪಾವತಿಸಿ ನಾಗರಹಾವನ್ನು 1 ವರ್ಷದ ಅವಧಿಗೆ ದತ್ತು ಪಡೆದಿರುತ್ತಾರೆ.
ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈಜೋಡಿಸಿದ ಎಲ್ಲರಿಗೂ ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: