ಕರ್ನಾಟಕಪ್ರಮುಖ ಸುದ್ದಿ

ಚಾಮರಾಜನಗರ ಜಿಲ್ಲೆಯಲ್ಲಿ ಏಕಾಏಕಿ 10 ಕೋವಿಡ್‌ ಪ್ರಕರಣಗಳು ದೃಢ

ರಾಜ್ಯ(ಚಾಮರಾಜನಗರ).ಮಾ.4:- ಚಾಮರಾಜನಗರ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ ಏಕಾಏಕಿ 10 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಕೆಲವು ದಿನಗಳಿಂದ ದಿನಕ್ಕೆ ಮೂರು -ನಾಲ್ಕು ಪ್ರಕರಣಗಳು ವರದಿಯಾಗುತ್ತಿದ್ದವು.

10 ಮಂದಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ದಿಢೀರನೆ 26ಕ್ಕೆ ಏರಿದೆ. ಈ ಪೈಕಿ 13 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 6,966 ತಲುಪಿದೆ. ಬುಧವಾರ ಇಬ್ಬರು ಸೇರಿದಂತೆ ಇದುವರೆಗೆ 6,808 ಮಂದಿ ಗುಣಮುಖರಾಗಿದ್ದಾರೆ. 112 ಮಂದಿ ಕೋವಿಡ್‌ನಿಂದ ಹಾಗೂ 20 ಮಂದಿ ಅನ್ಯ ಕಾರಣಗಳಿಂದ ಮೃತಪಟ್ಟಿದ್ದಾರೆ.

810 ಮಂದಿಯ ಕೋವಿಡ್ ಪರೀಕ್ಷಾ ವರದಿ ಬಂದಿದ್ದು, 800 ವರದಿಗಳು ನೆಗೆಟಿವ್‌ ಬಂದಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: