ಕರ್ನಾಟಕ

ಪುತ್ತೂರು: ಮಣ್ಣು ಕುಸಿದು ಇಬ್ಬರು ಕಾರ್ಮಿಕರ ಸಾವು

ಪುತ್ತೂರು,ಮಾ.4- ಮಣ್ಣು ಕುಸಿದು ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಪುತ್ತೂರು ತಾಲೂಕಿನ ಪಾಣಾಜೆಯಲ್ಲಿ ನಡೆದಿದೆ.

ಕೂಲಿ ಕಾರ್ಮಿಕರಾದ ಪಾರ್ಪಳ್ಳ ನಿವಾಸಿಗಳಾದ ಬಾಬು ಮತ್ತು ರವಿ ಮೃತಪಟ್ಟವರು. ಕಡಮ್ಮಾಜೆ ಹಾಜಿ ಅಬ್ದುಲ್ಲಾ ರವರಿಗೆ ಸೇರಿದ ಕೋಳಿ ಫಾರ್ಮ್‌ನ ತ್ಯಾಜ್ಯ ವಿಲೇವಾರಿಗೆ ಸಂಬಂಧಪಟ್ಟಂತೆ ಜೆಸಿಬಿ ಮೂಲಕ ಹೊಂಡ ತೆಗೆಸಲಾಗುತ್ತಿತ್ತು.

ಈ ವೇಳೆ ಬಾಬು, ರವಿ ಅಕಸ್ಮಾತ್ ಹೊಂಡದ ಒಳಗೆ ಬಿದ್ದಿದ್ದಾರೆ. ಬಳಿಕ ಇವರ ಮೇಲೇಯೇ ಮಣ್ಣು ಕೂಡ ಕುಸಿದು ಬಿದ್ದ ಪರಿಣಾಮವಾಗಿ ಮಣ್ಣಿನಡಿ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ.

ಮಣ್ಣಿನಡಿಯಲ್ಲಿ ಹೂತು ಹೋಗಿದ್ದ ಇಬ್ಬರ ಮೃತದೇಹವನ್ನು ಪುತ್ತೂರು ಅಗ್ನಿಶಾಮಕದಳ ಹಾಗೂ ಸಂಪ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಹೊರ ತೆಗೆದಿದ್ದಾರೆ. ಮೃತ ದೇಹಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿದೆ. (ಎಂ.ಎನ್)

Leave a Reply

comments

Related Articles

error: