ಕರ್ನಾಟಕಪ್ರಮುಖ ಸುದ್ದಿ

ಬೆತ್ತಲೆ ಮಾಡಿ ಥಳಿಸಿದ ಪ್ರಕರಣ: ಮೂವರಿಗೆ ಗಡಿ ಪಾರು ಶಿಕ್ಷೆ

ತುಮಕೂರಿನ ಗುಬ್ಬಿಯಲ್ಲಿ ದಲಿತ ಯುವಕನನ್ನು ಬೆತ್ತಲೆ ಮಾಡಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಿಂದ ಮೂವರು ಆರೋಪಿಗಳಿಗೆ ಜಿಲ್ಲಾಧಿಕಾರಿ  ಗಡಿಪಾರು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಅಲ್ಲಿನ ಜಿಲ್ಲಾಧಿಕಾರಿ ಕೆ.ಪಿ ಮೋಹನ್ ರಾಜ್ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕ ಅಭಿಷೇಕನಿಗೆ ವಿವಸ್ತ್ರಗೊಳಿಸಿ ಥಳಿಸಲಾಗಿತ್ತು. ಪ್ರಮುಖ ಆರೋಪಿ ಕಾಡು ಪ್ರಕಾಶ್, ರಮೇಶ್ ಸೇರಿದಂತೆ ಮೂವರು ಆರೋಪಿಗಳು ಥಳಿಸಿದ್ದ ಅವರನ್ನು ಎರಡು ವರ್ಷದ ಮಟ್ಟಿಗೆ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ವಿಚಾರಣೆ ಇರುವ ದಿನ ಮಾತ್ರ ಜಿಲ್ಲೆಗೆ ಆಗಮಿಸಬೇಕು. ಪ್ರತಿ ತಿಂಗಳು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಎದುರು ಹಾಜರಾಗಬೇಕು.
ಗಡಿಪಾರಾದ ಆರೋಪಿಗಳು ವಾಸವಿರುವ  ವಿಳಾಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಪಿ‌ ಮೋಹನ್ ರಾಜ್ ತಿಳಿಸಿದ್ದಾರೆ. ಈ ಆದೇಶದಿಂದ ಹಳೆ ಪ್ರಕರಣವೊಂದಕ್ಕೆ ಮರುಜೀವ ದೊರೆತಂತಾಗಿದೆ.  (ಕೆ.ಎಸ್-ಎಸ್.ಎಚ್)

 

Leave a Reply

comments

Related Articles

error: