ಪ್ರಮುಖ ಸುದ್ದಿವಿದೇಶ

ನ್ಯೂಜಿಲೆಂಡ್‌ ನ ಈಶಾನ್ಯ ಕರಾವಳಿಯಲ್ಲಿ ಪ್ರಬಲ ಭೂಕಂಪನ

ವಿದೇಶ(ವೆಲ್ಲಿಂಗ್ಟನ್)ಮಾ.5:- ನ್ಯೂಜಿಲೆಂಡ್‌ ನ ಈಶಾನ್ಯ ಕರಾವಳಿಯಲ್ಲಿ ನಿನ್ನೆ ರಾತ್ರಿ ಪ್ರಬಲ ಭೂಕಂಪನ ಸಂಭವಿಸಿದ್ದು, ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಸದ್ಯಕ್ಕೆ ಯಾವುದೇ ಗಂಭೀರ ಹಾನಿ ಅಥವಾ ಸಾವುನೋವುಗಳ ಬಗ್ಗೆ ವರದಿಗಳು ಬಂದಿಲ್ಲ.

ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.3 ದಾಖಲಾಗಿದ್ದು, ದೇಶದ ಉತ್ತರ ದ್ವೀಪದ ಪೂರ್ವ ಭಾಗದಲ್ಲಿ ಸುನಾಮಿ ಅಪಾಯವಿದೆ ಎಂದು ನ್ಯೂಜಿಲೆಂಡ್‌ ನ ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಸಂಸ್ಥೆ ಎಚ್ಚರಿಸಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: