ಪ್ರಮುಖ ಸುದ್ದಿವಿದೇಶ

ನ್ಯೂಜಿಲೆಂಡ್ ನಲ್ಲಿ ಪ್ರಬಲ ಭೂಕಂಪನ: ಸುನಾಮಿ ಅಪ್ಪಳಿಸುವ ಆತಂಕ ದೂರ

ವೆಲ್ಲಿಂಗ್ಟನ್,ಮಾ.5-ದಕ್ಷಿಣ ಪೆಸಿಫಿಕ್‌ನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ ಬೆನ್ನಲ್ಲೇ ಸುನಾಮಿ ಅಪ್ಪಳಿಸುವ ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೆ ಇದೀಗ ಸುನಾಮಿ ಭೀತಿಯ ಆತಂಕ ದೂರವಾಗಿದೆ.

ಸುನಾಮಿ ಎಚ್ಚರಿಕೆಯನ್ನು ನೀಡಿದ ತಕ್ಷಣ ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಸುನಾಮಿ ಆತಂಕ ದೂರವಾಗಿದ್ದು, ಜನರು ನಿರಾಳರಾಗಿದ್ದಾರೆ.

ಗಿಸ್ಬೋರ್ನ್ ಬಳಿಯ ಟೊಕೊಮರು ಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ಸುನಾಮಿ ಅಲೆಗಳು ಎದ್ದಿವೆ. ಬಳಿಕ ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಸಂಸ್ಥೆಯು ಸುನಾಮಿ ಭೀತಿಯ ಆತಂಕ ದೂರವಾಗಿದ್ದು, ಜನರು ಮನೆಗೆ ಹಿಂತಿರುಗಲು ತಿಳಿಸಿದೆ. ಆದರೂ ಕಡಲ ತೀರಕ್ಕೆ ಹೋಗಬಾರದಂತೆ ಸೂಚಿಸಿದೆ.

ಮೂರನೇ ಬಾರಿಗೆ ನ್ಯೂಜಿಲೆಂಡ್‌ನಿಂದ 1,000 ಕಿ.ಮೀ. ದೂರದ ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ 8.1 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಈ ಮೊದಲು ಹಲವಾರು ತಾಸುಗಳ ಅಂತರದಲ್ಲಿ ಸಂಭವಿಸಿದ ನಡುಕದಲ್ಲಿ 7.4 ಹಾಗೂ 7.3 ತೀವ್ರತೆಯ ಭೂಕಂಪನಗಳು ಸಂಭವಿಸಿತ್ತು. ಮೊದಲ ಕಂಪನವು ನ್ಯೂಜಿಲೆಂಡ್‌ಗೆ ಬಹಳ ಹತ್ತಿರವಾಗಿತ್ತು. ಮಧ್ಯ ರಾತ್ರಿ ಎಚ್ಚೆತ್ತುಕೊಂಡ ಜನರು ಭೀತಿಗೊಳಗಾದರು.

ಅಮೆರಿಕ ಭೂವೈಜ್ಞಾನಿಕ ಸಮೀಕ್ಷಾ ವರದಿ ಪ್ರಕಾರ ಕೆರ್ಮಾಡೆಕ್ ದ್ವೀಪದಲ್ಲಿ 19 ಕಿ.ಮೀ. ಆಳ ಸಮುದ್ರದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ತಿಳಿಸಿದೆ.

ಪ್ರಧಾನಿ ಜಸಿಂದಾ ಆರ್ಡೆರ್ನ್ ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಭಾವಿಸುತ್ತೇನೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: