ಮೈಸೂರು

ಯುವತಿಯ ಕೈಲಿದ್ದ ಮೊಬೈಲ್ ಕಸಿದು ಪರಾರಿ

ಸಹೋದರಿಯೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೋರ್ವಳಿಂದ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಬೆಲೆಬಾಳುವ ಮೊಬೈಲ್ ನ್ನು ಕಿತ್ತುಕೊಂಡು ಹೋದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ವಿಜಯನಗರ ಮೊದಲ ಹಂತದಲ್ಲಿ ಕುಂಬಾರ ಕೊಪ್ಪಲು ನಿವಾಸಿ ಕುಮಾರಿ ಎಂಬವರು ಖಾಸಗಿ ಬ್ಯುಸಿನೆಸ್ ಕಂಪನಿಯೊಂದರಲ್ಲಿ ಕೆಲಸ ಮುಗಿಸಿ ತನ್ನ ಸಹೋದರಿಯೊಂದಿಗೆ ನಡೆದುಕೊಂಡು ಮನೆಗೆ ಬರುತ್ತಿದ್ದರು. ಈ ಸಂದರ್ಭ ಕಾರ್ಪೋರೇಷನ್ ಬ್ಯಾಂಕ್ ಬಳಿ ಹಿಂದಿನಿಂದ ಬಂದ ಬೈಕ್ ಸವಾರರಿಬ್ಬರು 15,000ರೂ. ಮೌಲ್ಯದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಗಾಬರಿಗೊಂಡು ಇಬ್ಬರೂ ಕಿರುಚಿಕೊಂಡಾಗ ಅಕ್ಕಪಕ್ಕದಲ್ಲಿದ್ದವರು ಓಡಿ ಬಂದು ವಿಚಾರಿಸಿ ಅವರನ್ನು ಬೆನ್ನತ್ತಿದರಾದರೂ ಏನೂ ಪ್ರಯೋಜನವಾಗಲಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ವಿಜಯನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: