ಮನರಂಜನೆ

‘ಒಂದು ಮೊಟ್ಟೆಯ ಕಥೆ’ ಸಿನಿಮಾ ಟ್ರೇಲರ್ ಬಿಡುಗಡೆ

‘ಲೂಸಿಯಾ’ ಮತ್ತು ‘ಯೂ ಟರ್ನ್’ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಅವರು ನಿರ್ದೇಶಿಸಿರುವ ಮತ್ತೊಂದು ಚಿತ್ರ ‘ಒಂದು ಮೊಟ್ಟೆಯ ಕಥೆ’   ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಸಿನಿಮಾ ರಸಿಕರ ಗಮನ ಸೆಳೆದಿದೆ.

ಮೊದಲು ರಾಜ್ ಬಿ ಶೆಟ್ಟಿ ಅವರು ನಿರ್ದೇಶಿಸುತ್ತಿದ್ದ ಈ ಸಿನಿಮಾವನ್ನು ಈಗ ಪವನ್ ಕುಮಾರ್ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದು, ಪವನ್ ಕುಮಾರ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಈ ಸಿನಿಮಾದ ಪ್ರೀಮಿಯರ್ ಮೇ 6 ರಂದು ನ್ಯೂಯಾರ್ಕ್ ನಲ್ಲಿ ಜರುಗಲಿದ್ದು, ಪವನ್ ಕುಮಾರ್ ಮತ್ತು ತಂಡ ಪ್ರವಾಸಕ್ಕೆ ತೆರಳಲಿದ್ದಾರೆ. ಪವನ್ ಕುಮಾರ್ ಮತ್ತು ಸುಹಾನ್ ಪ್ರಸಾದ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ಮಿಧುನ್ ಮುಕುಂದನ್, ಸೀತೇಶ್ ಸಿ ಗೋವಿಂದ್, ರಾಜೇಶ್ ಕುಡ್ಲ, ಪ್ರವೀಣ್, ಪ್ರತೀಕ್ ಶೆಟ್ಟಿ ಮೊದಲಾದವರು ಕೆಲಸ ಮಾಡಿದ್ದಾರೆ. (ಎಲ್.ಜಿ)

 

Leave a Reply

comments

Related Articles

error: