ಮನರಂಜನೆ

ಅಕ್ಟೋಬರ್ ನಲ್ಲಿ ಹಸೆಮಣೆ ಏರಲಿದ್ದಾರೆ ನಾಗ ಚೈತನ್ಯ- ಸಮಂತಾ

ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಟಾಲಿವುಡ್ ನ ಯುವ ಜೋಡಿಗಳಾದ ನಾಗ ಚೈತನ್ಯ ಮತ್ತು ಸಮಂತಾ ಅವರ ಮದುವೆ ದಿನಾಂಕ ನಿಗದಿಯಾಗಿದೆ. ಇದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ.

2017 ರ ಜನವರಿ 29 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಇದೇ ವರ್ಷದ ಅಕ್ಟೋಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಅಕ್ಟೋಬರ್ ನಲ್ಲಿ ಮದುವೆ ನಡೆಯಲಿರುವುದರಿಂದ ಇಬ್ಬರು ಸ್ಟಾರ್ ನಟರು ತಮ್ಮ ಹೊಸ ಚಿತ್ರಗಳಿಂದ ಹಿಂದೆ ಸರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಜೋಡಿಯ ಅದ್ದೂರಿ ವಿವಾಹಕ್ಕೆ ದಕ್ಷಿಣ ಭಾರತದ ಸ್ಟಾರ್ ನಟರನ್ನು ಆಹ್ವಾನಿಸಲಿದ್ದಾರಂತೆ. (ಎಲ್.ಜಿ)

Leave a Reply

comments

Related Articles

error: