
ಮೈಸೂರು,ಮಾ.6:- ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕ್ರಿಕೆಟ್ ತಂಡವು ರೆಡ್ ಬುಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಯಶೀಲರಾಗಿ ಚಾಂಪಿಯನ್ ಶಿಪ್ ಗಳಿಸಿದ್ದಾರೆ.
ಅವರು ಅಂತಿಮ ಪಂದ್ಯದಲ್ಲಿ ಕೊಯಮ್ಮತ್ತೂರಿನ ರಾಮಕೃಷ್ಣ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ತಂಡದ ಮೇಲೆ ಜಯಸಾಧಿಸಿದರು. ಈ ಪಂದ್ಯಾವಳಿಯನ್ನು ರೆಡ್ ಬುಲ್ ಕಂಪನಿಯು ಮಾನಸ ಗಂಗೋತ್ರಿಯ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಆಯೋಸಲಾಗಿತ್ತು.
ವಿಜೇತರಾದ ತಂಡದ ನಾಯಕ ವೆಂಕಟೇಶ್ ಎಂ. ಹೇಮಂತ್ ಆರ್, ಮಯೂರ್ ಜೆ, ನಿಶಾಂತ್ ಎಸ್, ಅಮೃತ್ ರಾಜ್, ಸೆಬೆಸ್ಟಿನ್ ಅಲಿ, ಸಾಯಿಸೈಕತ್, ಬಸಿದ್ ಅಲಿ, ಆದಿತ್ಯ, ಪರಸರ, ಅಮನ್ ಪೊನ್ನಪ್ಪ, ರಾಹುಲ್ ಕುಮಾರ್, ಧನುಷ್ ರಾಜ್, ದೀಪಕ್ ಜೆ, ರಾಹುಲ್ ಪಿ, ರಾಹುಲ್ ಆನಂದ್ ಇವರನ್ನು ಕಾಲೇಜಿನ ಕ್ರೀಡಾ ಮಂಡಳಿಯ ಸದಸ್ಯರಾದ ವಾಣಿ, ಡಾ. ಸೋಮಶೇಖರ್ ಕೆ.ಕೆ., ದೈಹಿಕ ಶಿಕ್ಷಣ ನಿರ್ದೇಶಕರಾದ ಪಿ.ಎಸ್. ಮಧುಸೂಧನ, ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಹೆಚ್.ಎನ್. ಭಾಸ್ಕರ್, ಸೋಮಶೇಖರ್ ಅವರು ಅಭಿನಂದಿಸಿದ್ದಾರೆ. (ಜಿ.ಕೆ,ಎಸ್.ಎಚ್)