ಕರ್ನಾಟಕಪ್ರಮುಖ ಸುದ್ದಿ

ಖ್ಯಾತ ಕವಿ ಎನ್.‌ಎಸ್. ಲಕ್ಷ್ಮೀ ನಾರಾಯಣ ಭಟ್ಟ ಇನ್ನಿಲ್ಲ

ರಾಜ್ಯ( ಬೆಂಗಳೂರು)ಮಾ.6:-   ಖ್ಯಾತ ಕವಿ ಎನ್.‌ಎಸ್. ಲಕ್ಷ್ಮೀ ನಾರಾಯಣ ಭಟ್ಟ ಅವರು  ಇಂದು ನಿಧನರಾದರು.

1936ರ ನವೆಂಬರ್ 29ರಂದು ಶಿವಮೊಗ್ಗದಲ್ಲಿ ಜನಿಸಿದ್ದ ಅವರು  ಕನ್ನಡ ಭಾವಗೀತೆಗಳ ಲೋಕದಲ್ಲಿ ಅಮೂಲ್ಯ ಸಾಧನೆ ಮಾಡಿದವರು.  ಬೆಂಗಳೂರಿನಲ್ಲಿ ಕಾಲೇಜು ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

ವೃತ್ತಿ, ಸುಳಿ, ನಿನ್ನದೇ ನನ್ನ ಮಾತು, ಹೊಳೆಯ ಸಾಲಿನ ಮರ, ಪಾಂಚಾಲಿ, ಅರುಣಗೀತೆ, ಚಿತ್ರಕೂಟ, ದೀಪಿಕಾ, ಬಾರೋ ವಸಂತ, ಸುನೀತಾ ಕವನ ಸಂಕಲನಗಳನ್ನು   ಬರೆದಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: