ಕರ್ನಾಟಕಪ್ರಮುಖ ಸುದ್ದಿ

ಗೌರವ ರಕ್ಷಣೆಗಾಗಿ ನ್ಯಾಯಾಲಯದ ಮೊರೆ: ಸಚಿವ ನಾರಾಯಣಗೌಡ

ಮಂಡ್ಯ,ಮಾ.6-ನಾವು ಯಾವುದೇ ಭಯವಿಲ್ಲ. ಆದರೆ ನಮ್ಮ ಗೌರವ ರಕ್ಷಣೆಗೆ ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸತ್ಯಾಂಶ ಇದ್ದರೆ ಬಿಡುಗಡೆ ಮಾಡಲಿ. ಆದರೆ ಗ್ರಾಫಿಕ್ಸ್ ಕ್ರಿಯೆಟ್ ಮಾಡಿ ಗೌರವಕ್ಕೆ ಧಕ್ಕೆ ತರಬಾರದು ಎಂಬ ಉದ್ದೇಶದಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇವೆ ಎಂದರು.

ಇಂಥ ಘಟನೆಗಳಲ್ಲಿ ಸತ್ಯ ಇದ್ದರೆ ತೋರಿಸಲಿ. ಅದಕ್ಕೆ ನಾವು ತಲೆ ಬಾಗುತ್ತೇವೆ. ಜನಸಾಮಾನ್ಯರು ನಮ್ಮನ್ನು ನೋಡುತ್ತಿದ್ದಾರೆ. ನಮ್ಮ ಗೌರವದ ರಕ್ಷಣೆಗಾಗಿ ನ್ಯಾಯಾಲಯಕ್ಕೆ ಹೋಗಿದ್ದೇವೆ. ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿದೆ. ರಮೇಶ್‌ ಜಾರಕಿಹೊಳಿ ಅವರ ವಿಡಿಯೋ ಗ್ರಾಫಿಕ್ಸ್ ಮಾಡಿರಬಹುದು ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಬಿಜೆಪಿಗೆ ಹೋಗಿದ್ದ ಎಲ್ಲರನ್ನು ರಾಜಕೀಯ ಷಡ್ಯಂತ್ರ ಮಾಡಿ ಮುಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ವೈಯಕ್ತಿಕವಾಗಿ ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಇಂಥ ವಿಚಾರಗಳನ್ನಿಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ನಾನು ಬಾಂಬೆಯಲ್ಲಿ ಸ್ವಚ್ಛ ಚಾರಿತ್ರ್ಯದಿಂದ ಬದುಕಿದ್ದೇನೆ. ನಾನೇನು ಕಳ್ಳತನ, ಲೂಟಿ, ಚೆಕ್‌ಬೌನ್ಸ್ ಮಾಡಿಲ್ಲ. ಆದರೂ ನನ್ನ ಬಾಂಬೆ ಕಳ್ಳ ಅಂತ ಕರೆಯುತ್ತಿದ್ದಾರೆ. ಯಾಕೆ ಕರೆಯುತ್ತಾರೆ. ನಾನು ಶೀಘ್ರದಲ್ಲಿಯೇ ರಾಜಕಾರಣವನ್ನೇ ತ್ಯಾಗ ಮಾಡುತ್ತೇನೆ. ಈ ರೀತಿ ಮಾತನಾಡಬಾರದು ಎಂದರು.

ರಮೇಶ್‌ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಪ್ರಕರಣ ತನಿಖೆ ಹಂತದಲ್ಲಿದೆ. ಸಿಡಿಯು ಅಸಲಿಯೋ, ನಕಲಿಯೋ ಎಂಬುದು ಮುಂದೆ ತಿಳಿಯಲಿದೆ ಎಂದರು. (ಎಂ.ಎನ್)

Leave a Reply

comments

Related Articles

error: