ಕರ್ನಾಟಕಪ್ರಮುಖ ಸುದ್ದಿ

ನಮ್ಮ ವಿರುದ್ಧ ಷಡ್ಯಂತ್ರ ರಚಿಸಲಾಗುತ್ತಿದೆ: ಸಚಿವ ಭೈರತಿ ಬಸವರಾಜ್

ಮಂಗಳೂರು,ಮಾ.6-ನಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಹೀಗಾಗಿ ನಾವು ನ್ಯಾಯಾಲಯಕ್ಕೆ ಹೋಗಿದ್ದೇವೆ ಎಂದು ಸಚಿವ ಭೈರತಿ ಬಸವರಾಜ್ ಹೇಳಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಗೌರವ ರಕ್ಷಣೆಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವೆ ಬಿಟ್ಟರೆ ಇದರ ಹಿಂದೆ ಬೇರ್ಯಾವ ಉದ್ದೇಶವಿಲ್ಲ ಎಂದರು.

ಮುಂಬೈನಲ್ಲಿ ಏನೂ‌ ನಡೆದೇ ಇಲ್ಲ. ನಡೆದಿದ್ದರೆ ಅವರು ದಾಖಲೆ ಬಿಡುಗಡೆ ಮಾಡಲಿ. ನಾವು ಕೈ, ಬಾಯಿ ಶುದ್ದ ಇಟ್ಟುಕೊಂಡಿದ್ದೇವೆ. ನಾವು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ಟಾರ್ಗೆಟ್ ಮಾಡಲಾಗಿದೆ ಎಂದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದರು. (ಎಂ.ಎನ್)

Leave a Reply

comments

Related Articles

error: