
ಕರ್ನಾಟಕಪ್ರಮುಖ ಸುದ್ದಿ
ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ: ಸಚಿವ ಬಿ.ಸಿ.ಪಾಟೀಲ್
ಕೊಪ್ಪಳ,ಮಾ.6- ನಮ್ಮನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಹಾಗಾಗಿ ನಾವು ಕೋರ್ಟ್ ಮೋರೆ ಹೋಗಿದ್ದೇವೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ಹೇಳಿದ್ದಾರೆ.
ಗಂಗಾವತಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾವು ಕಷ್ಟಪಟ್ಟು ಮೇಲೆ ಬಂದವರು, ಹೀಗಾಗಿ ನಮ್ಮ ಮೇಲೆ ಬಹಳ ಜನರು ಕಣ್ಣಿಟ್ಟಿದ್ದಾರೆ. ನಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದರು.
ಇಂತಹ ಹಲವಾರು ಘಟನೆ ನಡೆದಿವೆ. ನಮಗೆ ಯಾವ ಆತಂಕವೂ ಇಲ್ಲ, ಅಪಖ್ಯಾತಿ ತರುವ ಜನ ಬಹಳ ಇದ್ದಾರೆ. ಸತ್ಯ ಹೊಸಲು ದಾಟಿ ಬರುವುದರೊಳಗಡೆ ಸುಳ್ಳು ಊರೆಲ್ಲ ಸುತ್ತಾಡಿ ಬಿಡುತ್ತದೆ. ಹಾಗಾಗಿ ನಮ್ಮ ತೇಜೋವಧೆ ತಪ್ಪಿಸಲು ಕೋರ್ಟ ಮೋರೆ ಹೋಗಿದ್ದೇವೆ ಎಂದರು. (ಎಂ.ಎನ್)