ಮೈಸೂರು

ಮಾ.19 : ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಜಾತ್ರಾ ಮಹೋತ್ಸವ

ಮೈಸೂರು, ಮಾ 6 :- ಧಾರ್ಮಿಕ ಇಲಾಖೆಗೆ ಒಳಪಟ್ಟ ‘ದಕ್ಷಿಣಕಾಶಿ’ ಎಂದೇ ಪ್ರಸಿದ್ಧವಾಗಿರುವ ನಂಜನಗೂಡಿನ   ಶ್ರೀಕಂಠೇಶ್ವರ ದೇವಾಲಯದಲ್ಲಿ 2021ನೇ ಸಾಲಿನ ದೊಡ್ಡ ಜಾತ್ರೆಯ ಪ್ರಯುಕ್ತ ಮಾರ್ಚ್ 19 ರಿಂದ 30ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಮಾರ್ಚ್ 26 ರಂದು ಬೆಳಗ್ಗೆ 6ರಿಂದ 7ಗಂಟೆ ಒಳಗೆ ಗೌತಮ ಪಂಚ ಮಹಾರಥೋತ್ಸವ ಹಾಗೂ ಮಾರ್ಚ್ 28ರಂದು ಸಂಜೆ 7ಗಂಟೆಗೆ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ಕಾರ್ಯಕ್ರಮವು ನಡೆಯಲಿದೆ ಎಂದು   ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: