ಮೈಸೂರು

ಮಾರ್ಚ್ 8ರಂದು ವಿದ್ಯುತ್ ನಿಲುಗಡೆ

ಮೈಸೂರು, ಮಾ 6 :- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11ಕೆ.ವಿ. ಕಾರ್ಯ ಮತ್ತು 66/11ಕೆ.ವಿ. ದೂರ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಮಾರ್ಚ್ 8ರಂದು 4ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಾಗೂ 66/11ಕೆವಿ ಸುತ್ತೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ಹೊಸ 66ಕೆವಿ ಮಾರ್ಗದ ತುರ್ತು ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ 66/11ಕೆವಿ ಕಾರ್ಯ ವ್ಯಾಪ್ತಿಯ ಪ್ರದೇಶಗಳಾದ ಹಾಡ್ಯ, ಕಾಹಳ್ಳಿ, ಕಾಮಳ್ಳಿ, ಕಾರ್ಯ, ಅರಳಿಕಟ್ಟೆಹುಂಡಿ, ಬಾನೂರು, ಚಿನ್ನಂಬಳ್ಳಿ, ಚುಂಚನಹಳ್ಳಿ, ಹನುಮನಪುರ, ಕಕ್ಕರಹಟ್ಟಿ. ಭೋಗಯ್ಯನಹುಂಡಿ ಗ್ರಾಮಗಳು/ ಗ್ರಾಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳು, 66/11ಕೆವಿ ದೂರವ್ಯಾಪ್ತಿಯ ಪ್ರದೇಶಗಳಾದ ಬಿದರಗೂಡು, ಕೆಂಬಾಳು, ಹಳ್ಳಿಕೆರೆಹುಂಡಿ, ಬ್ಯಾಳಾರು, ದೂರ, ತಾಳೂರು, ಮೂಡಗಳ್ಳಿ (ಕಾಟೂರು) ಗ್ರಾಮಗಳು/ ಗ್ರಾಪಂಚಾಯ್ತಿ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶಗಳು.
66/11ಕೆವಿ ಸುತ್ತೂರು ವ್ಯಾಪ್ತಿಯ ಪ್ರದೇಶಗಳಾದ ಕಿರುಗುಂದ, ಸೋನಳ್ಳಿ, ಕುಪ್ಪರವಳ್ಳಿ, ಬೆಳಗುಂದ, ನಗರ್ಲೆ, ಹೊರಳವಾಡಿ, ಸರಗೂರು, ಬಸವನಪುರ, ಮುಳ್ಳೂರು, ಗೀಕಳ್ಳಿ, ಗೀಕಳ್ಳಿಹುಂಡಿ, ಆಲಂಬೂರು, ಆಲಂಬೂರು ಮಂಟಿ, ಕಲ್ಮಳ್ಳಿ ಗ್ರಾಮಗಳಲ್ಲಿರುವ ಗೃಹಬಳಕೆ ಸ್ಥಾವರಗಳಿಗೆ ಮಾತ್ರ ಮತ್ತು ಸೋನಳ್ಳಿ, ಕಿರುಗುಂದ, ಬೆಳಗುಂದ, ಕಲ್ಮಳ್ಳಿ ವ್ಯಾಪ್ತಿಯ ಪ್ರದೇಶದಲ್ಲಿರುವ ಐಪಿ ಸ್ಥಾವರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು ನಂಜನಗೂಡು ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: