ಮೈಸೂರು

ಕ್ರಿಕೆಟ್ ಬೆಟ್ಟಿಂಗ್ : ಐವರ ಬಂಧನ

ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಐವರನ್ನು ಹೆಬ್ಬಾಳ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಹೆಬ್ಬಾಳು ನಿವಾಸಿಗಳಾದ ತರುಣ್, ಸಂತೋಷ್, ಮಂಜು, ಅಭಿಷೇಕ್, ಪ್ರವೀಣ್ ಎಂದು ಗುರುತಿಸಲಾಗಿದೆ. ಇವರು ಹೆಬ್ಬಾಳ ಪೊಲೀಸ್  ಠಾಣಾ ಸರಹದ್ದಿನ ಮನೆಯೊಂದರಲ್ಲಿ ಐಪಿಎಲ್ ಪಂದ್ಯಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್ ನಡೆಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಈ ಐವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕ್ರಿಕೆಟ್ ಬೆಟ್ಟಿಂಗ್ ಗೆ ಬಳಸಲಾದ ಮೂರು ಬೈಕ್,11 ಮೊಬೈಲ್ ಫೋನ್ ಗಳು, 1ಟಿವಿ, 2 ರಿಮೋಟ್ ಹಾಗೂ ನಗದು ಹಣ 6,500 ರೂ.ನಗದನ್ನು ವಶಪಡಿಸಿಕೊಂಡಿದ್ದಾರೆ.

ಹೆಬ್ಬಾಳು ಸಿಸಿಬಿ ಇನ್ಸಪೆಕ್ಟರ್ ರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: