ಮೈಸೂರು

ವಿಜ್ಞಾನ ಸತ್ಯದ ನಿಲುವನ್ನು ಪ್ರತಿಪಾದಿಸುತ್ತದೆ : ಪ್ರೊ.ಉಮೇಶ್

ಮೈಸೂರು,ಮಾ.7:-   ಮೈಸೂರಿನ ಎಂ.ಎಂ.ಕೆ ಮತ್ತು ಎಸ್.ಡಿ.ಎಂ.ಮಹಿಳಾ ಮಹಾ ವಿದ್ಯಾಲಯದಲ್ಲಿ ಡಾ.ಸಿ.ವಿ.ರಾಮನ್ ಜನ್ಮ ದಿನೋತ್ಸವ ಮತ್ತು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ನೆನಪಿಗಾಗಿ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರು ಮತ್ತು ಪ್ರಸಿದ್ಧಭೌತ ವಿಜ್ಞಾನಿ ಪ್ರೊ.ಉಮೇಶ್ ಮಾತನಾಡಿ ವಿಜ್ಞಾನ ತಂತ್ರಜ್ಞಾನ ಮತ್ತು ನಾವೀನ್ಯತೆ – ಶಿಕ್ಷಣ, ಕೌಶಲ್ಯ ಮತ್ತು ಕೆಲಸದ ಮೇಲೆ ಪರಿಣಾಮ” ಎಂಬ ವಿಷಯದ ಕುರಿತು   ಮಾತನಾಡಿದರು.
ತಂತ್ರಜ್ಞಾನವನ್ನು ಚಾಲನೆ ಮಾಡುವ ಮತ್ತು ಯುವ ಮನಸ್ಸುಗಳನ್ನು ಬೆಳಗಿಸುವ ಮೂಲ ವಿಜ್ಞಾನಗಳತ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ದೃಷ್ಟಿಯಿಂದ ನಾವು ವಿಜ್ಞಾನ ದಿನವನ್ನು ಆಚರಿಸುತ್ತೇವೆ. ವಿಜ್ಞಾನ ಸತ್ಯದ ನಿಲುವನ್ನು ಪ್ರತಿಪಾದಿಸುತ್ತದೆ. ಭಾರತವು ವಿಶ್ವದ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಅಗಾದವಾದ ಕೊಡುಗೆಯನ್ನು ನೀಡಿದೆ. ಆದರೆ ನಮ್ಮ ದೇಶದಲ್ಲಿ ವಿಜ್ಞಾನದ ಸಂಶೋಧನೆಗಳು ಅಗಾಧ ಪ್ರಮಾಣದಲ್ಲಿ ಆಗದಿರುವುದು ವಿಪರ್ಯಾಸವೆಂದರು.
ಡಾ.ಸಿ.ವಿ.ರಾಮನ್ ಅವರು ಭೌತ ವಿಜ್ಞಾನಕ್ಕೆ ನೀಡಿದ ಸಂಶೋಧನೆ ಮತ್ತು ಸಿದ್ದಾಂತದ ಪರಿಣಾಮವಾಗಿ ವಿಜ್ಞಾನದ ಹೊಸ ಓದು ಆರಂಭವಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನದ ಆಗಮನದಿಂದಾಗಿ ವೈದ್ಯ ವಿಜ್ಞಾನವು ಹೆಮ್ಮರವಾಗಿ ಬೆಳೆದು ಸಮಾಜದಲ್ಲಿ ಉಂಟಾಗುವ ಸಾಂಕ್ರಾಮಿಕ ರೋಗ ಹಾಗೂ ಪ್ರಸಕ್ತ ಆತಂಕವಾದ ಕೋವಿಡ್ ಕೊರೋನದ ಆತಂಕದ ಸಂದರ್ಭಗಳನ್ನುನಿವಾರಿಸಲು ಹೊಸ ವೈಜ್ಞಾನಿಕ ಸಂಶೋಧನೆಗಳು ನಿತ್ಯವೂ ಸಾಗುತ್ತಿದೆ, ವಿಜ್ಞಾನದ ಅಭಿವೃದ್ದಿಯ ಕಾರಣದಿಂದ ಇಂದು ಮಾನವನ ಅನಂತ ಶಕ್ತಿಯ ಅನಾವರಣವಾಗಿದ್ದು ಇಂದಿನ ವಿದ್ಯಾರ್ಥಿಗಳು ವಿಜ್ಞಾನಗಳ ಮೂಲ ಸತ್ವವನ್ನು ಇತರರಿಗೆ ತಿಳಿಸಲು ಸಂಶೋಧನೆಯ ಮೂಲಕ ತಿಳಿಸುವುದು ಅವಶ್ಯಕವಾಗಿದೆ. ಹೊಸ ಶಿಕ್ಷಣ ನೀತಿಯಿಂದ ವಿಜ್ಞಾನದ ಎಲ್ಲಾ ವಿಷಯಗಳು ಜನರಿಗೆ ತಿಳಿಯಬೇಕಿದೆ ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸಾಯಿನಾಥ್ ಮಲ್ಲಿಗೆ ಮಾಡು ವಹಿಸಿದ್ದರು .ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಭಾರತಿ ಮತ್ತು ಉಪನ್ಯಾಸಕರಾದ ಪ್ರೊ ಚಾಂದಿನಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: